“SAVE BJP” : ಕಮಲ ನಾಯಕರ ವಿರುದ್ಧವೇ ಅಭಿಯಾನ ಪ್ರಾರಂಭಿಸಿದ ಕಾರ್ಯಕರ್ತರು !

ಮೈಸೂರು : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡದ ಹಿನ್ನೆಲೆ  ಬೆಂಬಲಿಗರ ಆಕ್ರೋಶ ಇನ್ನು ತಣ್ಣಗಾಗಿಲ್ಲ. ಹೌದು, ಬಿವೈ ವಿಜಯೇಂದ್ರ ಅವರಿಗೆ ಟಿಕೆಟ್ ಕೈ ತಪ್ಪಿದಕ್ಕೆ ಬಿಜೆಪಿ ಕಾರ್ಯಕರ್ತರ ಸಿಟ್ಟು ಇನ್ನು ಮುಂದುವರೆದಿದ್ದು, ತಮ್ಮ ಪಕ್ಷದ ವಿರುದ್ದವೇ ‘ಸೇವ್ ಬಿಜೆಪಿ’ ಹೆಸರಿನಲ್ಲಿ ಅಭಿಯಾನ ನಡೆಸುತ್ತಿದ್ದಾರೆ.

ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಸಹ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಬಿ.ವೈ ವಿಜಯೇಂದ್ರ ಬೆಂಬಲಿಗರು ಇಬ್ಬರನ್ನು ವಜಾಗೊಳಿಸುವಂತೆ ಆಗ್ರಹಿಸಿ ಪೋಸ್ಟರ್ ಅಭಿಯಾನ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರುಣಾದಿಂದ ವಿಜಯೇಂದ್ರಗೆ ಟಿಕೆಟ್ ಕೈತಪ್ಪಲು ಇಬ್ಬರು ಕಾರಣ ಎಂಬ ಆರೋಪ ಮಾಡಲಾಗಿತ್ತು. ಇದೀಗ ಇಬ್ಬರನ್ನೂ ವಜಾಗೊಳಿಸುವಂತೆ ಕೂಗು ಕೇಳಿ ಬರುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್ ನಡೆಸಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com