ಮುಳುಗುತ್ತಿದ್ದ ಮಗುವನ್ನು ರಕ್ಷಿಸಿ ಉಸಿರುಬಿಟ್ಟ ತಂದೆ : ಮನಕಲಕುವ ಘಟನೆಗೆ ಸಾಕ್ಷಿಯಾಯ್ತು ಮಂಡ್ಯ

ಮಂಡ್ಯ : ನೀರಿನಲ್ಲಿ ಮುಳುಗುತ್ತಿದ್ದ ತನ್ನ ಒಂದು ವರ್ಷದ ಮಗುವನ್ನು ರಕ್ಷಿಸಿ  ಬಳಿಕ ತಂದೆ ಪ್ರಾಣಬಿಟ್ಟ ಹೃದಯ ವಿದ್ರಾವಕ ಘಟನೆ ಮಂಡ್ಯದಲ್ಲಿ ನಡೆದಿದೆ.

ಮೃತ ತಂದೆಯನ್ನು ಫಿರೋಜ್‌ ಎಂದು ಹೆಸರಿಸಲಾಗಿದೆ. ಮಂಡ್ಯದ ನಾಗಮಂಗಲ ತಾಲ್ಲೂಕಿನ ಬೀರೇಶ್ವರ ಗ್ರಾಮದ ಕೆರೆಯಲ್ಲಿ ಫಿರೋಜ್‌ ಪತ್ನಿ ಜಬಿನ್‌ ತಾಜ್‌ ಬಟ್ಟೆ ತೊಳೆಯಲು ಹೋಗಿದ್ದರು. ಈ ವೇಳೆ ಪತಿ ಫಿರೋಜ್‌ ಹಾಗೂ ಒಂದು ವರ್ಷದ ಮಗ ಸಹ ಇದ್ದರು.  ಈ ವೇಳೆ ಮಗು ಆಟವಾಡುತ್ತಾ ನೀರಿಗೆ ಬಿದ್ದಿದೆ. ಮಗನನ್ನು ರಕ್ಷಿಸಲು ಫಿರೋಜ್‌ ನೀರಿಗಿಳಿದಿದ್ದು, ಮಗನನ್ನು ರಕ್ಷಿಸಿದ್ದಾರೆ. ಆದರೆ ಫಿರೋಜ್‌ಗೆ ಸರಿಯಾಗಿ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕೂಡಲೆ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಕೆರೆಯಿಂದ ಹೊರತೆಗಿದಿದ್ದಾರೆ. ಮಗು ಅಸ್ವಸ್ಥವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com