BSY ಹುಟ್ಟಿದಾಗ ಅವರ ನಾಲಿಗೆ ಕ್ಲೀನ್‌ ಮಾಡಿಲ್ಲ ಅನ್ಸುತ್ತೆ, ಅದಕ್ಕೆ ಹೊಲಸು ಮಾತಾಡ್ತಾರೆ : ಖರ್ಗೆ

ಕಲಬುರಗಿ : ಬಿಎಸ್ ಯಡಿಯೂರಪ್ಪ ವಿರುದ್ದ ಸಂಸದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಅಫಜಲಪೂರ ಪಟ್ಟಣದ ನ್ಯಾಷನಲ್ ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಖರ್ಗೆ,
ಹುಟ್ಟಿದಾಗ ಮಗುವಿನ ನಾಲಿಗೆ ಮೇಲಿನ ಹೊಲಸು ಸ್ವಚ್ಛಗೊಳಿಸ್ತಾರೆ. ಆದ್ರೆ ಯಡಿಯೂರಪ್ಪ ಹುಟ್ಟಿದಾಗ ನಾಲಿಗೆ ಕ್ಲೀನ್ ಮಾಡಿದಂತಿಲ್ಲ,

ಹೀಗಾಗಿ ನಾಲಿಗೆಗೆ ಹಿಡಿತವಿಲ್ಲದಂತೆ ಮಾತನಾಡುತ್ತಾ ತಿರುಗುತ್ತಿದ್ದಾರೆ. ಎಲ್ಲರು ಬಾಯಿಂದ ಉಂಡು ಕೆಳಗಿಂದ ಬಿಡ್ತಾರೆ, ಯಡಿಯೂರಪ್ಪ ಕೆಳಗಿಂದ ಬಿಡುವುದನ್ನು ಬಾಯಿಂದ ಬಿಡ್ತಾರೆ. ಇದು ಮಾಲಿಕಯ್ಯ ಗುತ್ತೆದಾರ, ಎಂ.ವೈ ಪಾಟೀಲ್ ನಡುವಿನ ಚುನಾವಣೆಯಲ್ಲ. ಆರ್.ಎಸ್.ಎಸ್ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ತತ್ವಸಿದ್ಧಾಂತ ನಡುವಿನ ಹೋರಾಟ ಎಂದಿದ್ದಾರೆ.

ನಿನ್ನೆ ಮೊನ್ನೆವರೆಗೆ ಸಿಎಂ ಸಿದ್ದರಾಮಯ್ಯನವರನ್ನು ಹೊಗಳಿದವರಿಂದ ಈಗ ತೆಗಳಿಕೆ ಶುರುವಾಗಿದೆ. ತತ್ವ ಸಿದ್ದಾಂತ ಇಲ್ಲದೆ ಮಾತನಾಡುತ್ತಿದ್ದಾರೆ, ಪರೋಕ್ಷವಾಗಿ ಗುತ್ತೆದಾರ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com