ಜೆಡಿಎಸ್‌ V/S ಕಾಂಗ್ರೆಸ್‌ : ಮಾಜಿ ಸಚಿವರ ಮಕ್ಕಳ ಪುಂಡಾಟಕ್ಕೆ ಬೆಚ್ಚಿಬಿದ್ದ ಕೈ ನಾಯಕ !

ಹಾಸನ : ದಿನದಿಂದ ದಿನಕ್ಕೆ ಮಾಜಿ ಸಚಿವ ರೇವಣ್ಣ ಅವರ ಪುತ್ರರ ಪುಂಡಾಟ ಹೆಚ್ಚಾಗುತ್ತಿದೆ ಇದಕ್ಕೆ ಇಂಬು ಕೊಡುವಂತೆ ಚುನಾವಣಾ ಪ್ರಚಾರದ ವೇಳೆ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಸದಸ್ಯ ಶ್ರೇಯಸ್ ಪಟೇಲ್ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ ವೇಳೆ ಜೆಡಿಎಸ್ ಕಾರ್ಯಕರ್ತರಿಂದ ಇಂತಹದ್ದೊಂದು ಕೃತ್ಯ ನಡೆದಿದೆ.


ಡಿಕೆ ಶಿವಕುಮಾರ್ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಪ್ರಚಾರ ಆರಂಭಿಸಿದ್ದ ಶ್ರೇಯಸ್ ಪಟೇಲ್ ಕಾರಿಗೆ ಜೆಡಿಎಸ್ ಕಾರ್ಯಕರ್ತರು ಕಲ್ಲಿನ ತೂರಾಟ ನಡೆಸಿದ್ದಾರೆ. ಸೋಲಿನ ಭೀತಿಯನ್ನು ಎದುರಿಸುತ್ತಿರುವ ಜೆಡಿಎಸ್ ಇಂತಹ ಕೃತ್ಯಕ್ಕೆ ಕೈ ಹಾಕುತ್ತಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com