Football : ಮೆಸ್ಸಿ ಹ್ಯಾಟ್ರಿಕ್ ಗೋಲ್ : 25ನೇ ಬಾರಿಗೆ La Liga ಪ್ರಶಸ್ತಿ ಗೆದ್ದ ಬಾರ್ಸಿಲೋನಾ

ಸ್ಟ್ರೈಕರ್ ಲಿಯೋನೆಲ್ ಮೆಸ್ಸಿ ಬಾರಿಸಿದ ಹ್ಯಾಟ್ರಿಕ್ ಗೋಲ್ ಗಳ ನೆರವಿನಿಂದ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ 25ನೇ ಬಾರಿಗೆ ಲಾ ಲೀಗಾ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಡಿಪೋರ್ಟಿವೊ ಲಾ ಕೊರುನಾ ತಂಡವನ್ನು 4-2 ಗೋಲ್ ಗಳ ಅಂತರದಿಂದ ಮಣಿಸಿದ ಬಾರ್ಸಿಲೋನಾ, ಇನ್ನೂ 4 ಪಂದ್ಯಗಳು ಬಾಕಿ ಇರುವಾಗಲೇ ಲಾ ಲೀಗಾ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

Image result for messi hat trick La liga deportivo

ಗೆಲುವಿನ ಬಳಿಕ ಮಾತನಾಡಿದ ಲಿಯೋನೆಲ್ ಮೆಸ್ಸಿ, ‘ತುಂಬಾ ಸಂತೋಷವಾಗುತ್ತಿದೆ, ದೀರ್ಘ ಸಮಯದವರೆಗೆ ನಡೆಯುವ ಈ ಲೀಗ್ ಗೆಲ್ಲುವುದು ಸುಲಭವಲ್ಲ, La Liga ಗೆಲುವು ಅತಿಯಾದ ಹರ್ಷವನ್ನು ತರುತ್ತದೆ, ನಮ್ಮ ಅಭಿಮಾನಿಗಳೊಂದಿಗೆ ಈ ಸಂಭ್ರಮವನ್ನು ಆಚರಿಸಲಿದ್ದೇವೆ ‘ ಎಂದಿದ್ದಾರೆ. ಬಾರ್ಸಿಲೋನಾ ಕೋಚ್ ಅರ್ನೆಸ್ಟೋ ವಾಲ್ವರ್ಡ್ ತಮ್ಮ ತಂಡದ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com