ವಿದ್ಯುಚ್ಛಕ್ತಿ ಭಾರತದ ಪ್ರತಿಯೊಂದು ಹಳ್ಳಿಯನ್ನೂ ತಲುಪಿದೆ : ಪ್ರಧಾನಿ ಮೋದಿ

ಭಾರತ ದೇಶದ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ಸರಬರಾಜು ಕಲ್ಪಿಸುವ ಬೃಹತ್ ಕಾರ್ಯವನ್ನು ಕೊನೆಗೂ ಸಂಪೂರ್ಣಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಿದ್ಯುಚ್ಛಕ್ತಿ ಇಲ್ಲದ ಭಾರತದ ಕೊನೆಯ ಊರಾಗಿದ್ದ, ಮಣಿಪುರದ ಸೇನಾಪತಿ ಜಿಲ್ಲೆಯ ಹಳ್ಳಿಗೂ ಶನಿವಾರ ವಿದ್ಯುಚ್ಛಕ್ತಿ ತಲುಪಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

‘ 2018 ಏಪ್ರಿಲ್ 28 ಭಾರತದ ಅಭಿವೃದ್ಧಿಯ ಪಥದಲ್ಲಿ ಐತಿಹಾಸಿಕ ದಿನವಾಗಿ ನೆನಪಿನಲ್ಲಿ ಉಳಿಯಲಿದೆ. ಹಲವಾರು ಭಾರತೀಯರ ಜೀವನವನ್ನು ಬದಲಾಯಿಸುವ ದಿಶೆಯಲ್ಲಿ ನಾವು ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇವೆ. ಪ್ರತಿಯೊಂದು ಹಳ್ಳಿಯೂ ವಿದ್ಯುತ್ ಸರಬರಾಜನ್ನು ಹೊಂದಿದೆ ಎಂದು ತಿಳಿಸಲು ಸಂತಸವಾಗುತ್ತದೆ ‘ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.