SC, ST ಪೊಲೀಸ್ ಹುದ್ದೆ ಆಕಾಂಕ್ಷಿಗಳ ಎದೆಯ ಮೇಲೆ ಬಿದ್ದ ಜಾತಿ ಗುರುತು : ಎಲ್ಲೆಡೆ ತೀವ್ರ ವಿರೋಧ

ಭೋಪಾಲ್ : ಪೊಲೀಸ್ ಪೇದೆಗಳ ನೇಮಕಾತಿ ಹಿನ್ನೆಲೆಯಲ್ಲಿ  ವೈದ್ಯಕೀಯ ಪರೀಕ್ಷೆ  ನಡೆಯುವುದು ತಿಳಿದಿರುವ ವಿಚಾರವೇ. ಆದರೆ ಭೋಪಾಲ್‌ನಲ್ಲಿ ಪರೀಕ್ಷೆ ವೇಳೆ ಅಭ್ಯರ್ಥಿಗಳ ಎದೆಯ ಮೇಲೆ ಎಸ್‌ಸಿ ಎಸ್‌ಟಿ ಗುರುತು ಹಾಕಲಾಗಿದ್ದು, ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಕಾನ್ಸ್‌ಟೇಬಲ್‌ ಹುದ್ದೆಗಾಗಿ ನೋಮಕಾತಿ ಪ್ರಕ್ರಿಯೆ ನಡೆಸಿದ್ದು, ಈ ವೇಳೆ ಪರೀಕ್ಷೆಗೆಂದು ಹಾಜರಾಗಿದ್ದ ಆಕಾಂಕ್ಷಿಗಳ ಎದೆಯ ಮೇಲೆ ಆತನ ಜಾತಿಯ ಗುರುತು ಹಾಕಲಾಗಿದೆ. ಈ ಕುರಿತ ಫೋಟೋಗಳು ಈಗ  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
 ಈ ಫೋಟೋ ವೈರಲ್ ಆಗುತ್ತಿದ್ದಂತೆ ಧಾರ್‌ನ ಪೊಲೀಸ್ ವರಿಷ್ಠಾಧಿಕಾರಿ ವೀರೇಂದ್ರ ಸಿಂಗ್‌ , ಇದೊಂದು ಗಂಭೀರ ಪ್ರಕರಣವಾಗಿದ್ದು, ತನಿಖೆಗೆ ಆದೇಶಿಸಿರುವುದಾಗಿ ಹೇಳಿದ್ದಾರೆ.
ಎದೆಯ ಮೇಲೆ ಜಾತಿಯನ್ನು ಬರೆದು ಕಳಿಸಿರುವುದು ಅವಮಾನಕರ ಸಂಗತಿ. ತಪ್ಪಿತಸ್ಥರ ವಿರುದ್ದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ರಾಮದಾಸ್‌ ಅಠಾವಳೆ ಹೇಳಿದ್ದಾರೆ.

One thought on “SC, ST ಪೊಲೀಸ್ ಹುದ್ದೆ ಆಕಾಂಕ್ಷಿಗಳ ಎದೆಯ ಮೇಲೆ ಬಿದ್ದ ಜಾತಿ ಗುರುತು : ಎಲ್ಲೆಡೆ ತೀವ್ರ ವಿರೋಧ

Leave a Reply

Your email address will not be published.