ಪ್ರಕಾಶ್ ರೈ ನಾಲಿಗೆ ದುಪ್ಪಟ್ಟು ಹಣಕ್ಕೆ ಮಾರಾಟವಾಗಿದೆ, ಅವರಿಗೆ ಅರೆಹುಚ್ಚು : ಅನಂತ್ ಕುಮಾರ್ ಹೆಗಡೆ
ಬೆಳಗಾವಿ : ಪ್ರಧಾನಿ ಮೋದಿ ವಿರುದ್ಧ ಪ್ರಚಾರ ಮಾಡುವ ಸಲುವಾಗಿ ಕಾಂಗ್ರೆಸ್ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಗೆ 5 ಲಕ್ಷ ಕೋಟಿ ರೂ ನೀಡಿದೆ. ಕಾಂಗ್ರೆಸ್ ಆದೇಶದಂತೆ ಸಂಸ್ಥೆ ದೇಶದಲ್ಲಿ ಪ್ರಚಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
ಎಂ.ಕೆ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ವಿರುದ್ಧ ಪ್ರಚಾರ ಮಾಡಲು ಗೌರಿ ಸಂತಾನ, ಆಸಂತಾನ, ಈ ಸಂತಾನ ಅಂತ ಎಲ್ಲರೂ ಒಂದಾಗಿದ್ದಾರೆ. ವಿಚಾರವಾದಿಗಳು ಎಂದು ಹೇಳಿಕೊಳ್ಳುವವರು, ಬುದ್ದಿವಂತರು ತಮ್ಮನ್ನು ತಾವು ಹಣಕ್ಕಾಗಿ ಮಾರಿಕೊಂಡಿರುವುದಾಗಿ ಆರೋಪಿಸಿದ್ದಾರೆ.
ಪ್ರಕಾಶ್ ರಾ ಅವರ ನಾಲಿಗೆ ಎರಡು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎಂದಿರುವ ಹೆಗಡೆ, ನಾನು ಹಿಂದೂ ವಿರೋಧಿ ಅಲ್ಲ, ಮೋದಿ, ಶಾ, ಅನಂತ್ ಕುಮಾರ್ ಹೆಗಡೆ ವಿರೋಧಿ ಎನ್ನುವ ಇವರಿಗೆ ಅರೆಹುಚ್ಚು ಎಂದಿದ್ದಾರೆ. ಮೋದಿ ಕಪ್ಪು ಹಣದ ಬಾಣ ಬಿಡುತ್ತಿದ್ದಂತೆ ಒಬ್ಬೊಬ್ಬರೇ ದೇಶ ಬಿಡಲು ಶುರುಮಾಡಿದ್ದಾರೆ. ಇನ್ನೇನು ಕೆಲವೇ ದಿನದಲ್ಲಿ ಕಾಂಗ್ರೆಸ್ನ ರಾಹುಲ್ ಗಾಂಧಿ ಸಹ ತಮ್ಮ ಕೊಲಂಬಿಯಾ ಗರ್ಲ್ ಫ್ರೆಂಡ್ ಜೊತೆ ಹೋಗುವುದಾಗಿ ಹೇಳಿದ್ದಾರೆ.