PUC ಫಲಿತಾಂಶ : ಕಲಾ, ವಾಣಿಜ್ಯ. ವಿಜ್ಞಾನ…ಮೂರೂ ವಿಭಾಗದಲ್ಲಿ ಮಿಂಚಿದ ಬಾಲಕಿಯರು

ಬೆಂಗಳೂರು : ದ್ವಿತೀಯು ಪಿಯುಸಿ ಫಲಿತಾಂಶ ಪ್ರಕಟವಾಗಿರುವಂತೆ ಆಯಾ ವಿಭಾಗದ ಟಾಪರ್‌ಗಳ ಹೆಸರು ಏನ್‌ಸುದ್ದಿಗೆ ಲಭ್ಯವಾಗಿದೆ.
ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಬಾಲಕಿ ಕೃತಿ, ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ವರ್ಷಿಣಿ, ಅಮೃತಾ, ಹಾಗೂ ಕಲಾ ವಿಭಾಗದಲ್ಲಿ ಬಳ್ಳಾರಿಯ ಸ್ವಾತಿ ಎಸ್‌ ಟಾಪರ್ ಆಗಿದ್ದಾರೆ.
ಬಳ್ಳಾರಿಯ ಜಿಲ್ಲೆಯ ಕೊಟ್ಟೂರಿನ ಇಂದೂ ಪಿಯು ಕಾಲೇಜಿನ ಮೂವರು ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳನ್ನು ಬಾಚಿಕೊಂಡಿದ್ದಾರೆ. ಈ ಹಿಂದೆ ಎರಡು ಬಾರಿಯೂ ಈ ಕಾಲೇಜು ಕಲಾ ವಿಭಾಗದಲ್ಲಿ ಮೊದಲ ರ್ಯಾಂಕ್‌ ಪಡೆಯುತ್ತಿದೆ.
(ಸ್ವಾತಿ, ರಮೇಶ್‌, ಕಾವ್ಯಾಂಜಲಿ)
ಅತಿ ಹೆಚ್ಚು ಅಂಕ ಪಡೆದ ಟಾಪರ್ಸ್‌ಗಳ ಪಟ್ಟಿ ಇಲ್ಲಿದೆ….
ವಿಜ್ಞಾನ ವಿಭಾಗ : ಕೃತಿ ಹನುಮಂತ ಮುಟ್ಟಗಿ (597), ವಿವಿಎಸ್ ಸರ್ದಾರ್ ಪಟೇಲ್ ಕಾಲೇಜ್ ಬೆಂಗಳೂರು.
ಮೋಹನ್ ಎಸ್‌ಎಲ್‌ (595), ಮಾಸ್ಟರ್ಸ್ ಪಿಯು ಕಾಲೇಜ್ ಹಾಸನ.
ಅಂಕಿತಾ ಪ್ರಸಾದ್ ಬಾರ್ಕಿ (595), ಗೋವಿಂದ್ ದಾಸ ಪಿಯು ಕಾಲೇಜ್ ಸೂರತ್ಕಲ್.

ವಾಣಿಜ್ಯ ವಿಭಾಗ : ವರ್ಷಿಣಿ ಎಂ. ಭಟ್ (595), ವಿದ್ಯಾ ಮಂದಿರ ಪಿಯು ಕಾಲೇಜ್ ಮಲ್ಲೇಶ್ವರಂ ಬೆಂಗಳೂರು.
ಅಮೃತಾ ಎಸ್‌.ಆರ್ (595), ಎಎಸ್‌ಸಿ ಪಿಯು ಕಾಲೇಜ್ ಬೆಂಗಳೂರು.
ಪೂರ್ವಿತಾ ಆರ್‌ (594), ಮೌಂಟ್ ಕಾರ್ಮೆಲ್ ಕಾಲೇಜ್ ಬೆಂಗಳೂರು.

ಕಲಾ ವಿಭಾಗ: ಸ್ವಾತಿ ಎಸ್‌ (595), ಇಂದು ಪಿಯು ಕಾಲೇಜ್ ಕೊಟ್ಟೂರು, ಬಳ್ಳಾರಿ.
ರಮೇಶ್ ಎಸ್‌ ವಿ (593), ಇಂದು ಪಿಯು ಕಾಲೇಜ್ ಕೊಟ್ಟೂರು, ಬಳ್ಳಾರಿ.
ಕಾವ್ಯಾಂಜಲಿ ಗೊರವರ (588), ಇಂದು ಪಿಯು ಕಾಲೇಜ್ ಕೊಟ್ಟೂರು, ಬಳ್ಳಾರಿ.

Leave a Reply

Your email address will not be published.