HDK ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಅವನು ನನ್ನ ಮಗನೇ ಅಲ್ಲ ಅಂತ ಬಹಿಷ್ಕಾರ ಹಾಕ್ತೀನಿ : HDD

ಬೆಂಗಳೂರು : ಒಂದು ವೇಳೆ ರಾಜ್ಯ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಕುಮಾರಸ್ವಾಮಿ, ಬಿಜೆಪಿ ಜೊತೆ ಹೋದರೆ ಆತನನ್ನು ಮನೆಗೆ ಸೇರಿಸುವುದಿಲ್ಲ, ಬಹಿಷ್ಕಾರ ಹಾಕುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹೇಳಿದ್ದಾರೆ.

ರಾಷ್ಟ್ರೀಯ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, 2006ರಲ್ಲಿ ಬಿಜೆಪಿ ಜೊತೆ ಸರ್ಕಾರ ನಡೆಸಿದ ತಪ್ಪಿನಿಂದ ಕುಮಾರಸ್ವಾಮಿ ಪಾಠ ಕಲಿತಿದ್ದಾನೆ. ಸಾರ್ವಜನಿಕ ಭಾಷಣದಲ್ಲೂ ಈ ಬಗ್ಗೆ ಸ್ಪಷ್ಟಪಡಿಸಿದ್ದಾನೆ. ನಾನು ತಪ್ಪು ಮಾಡಿದೆ. ಬಿಜೆಪಿ ಜೊತೆ ನಾನು ಕೈ ಜೋಡಿಸಿದ್ದರಿಂದ ನನ್ನ ತಂದೆಗೆ ನೋವಾಗಿದೆ. ಅವರ ಆರೋಗ್ಯ ಸಹ ಹಾಳಾಗಿತ್ತು. ಅವರು ಸಂಕಟ ಅನುಭವಿಸಿದ್ದರು. ಮತ್ತೆ ಇನ್ನೆಂದೂ ಅಂತಹ ತಪ್ಪು ಮಾಡಲ್ಲ ಎಂದಿದ್ದಾರೆ.

ರಾಜ್ಯದ ನೆಮ್ಮದಿಯನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ. ಕುಮಾರಸ್ವಾಮಿಗೆ ನನ್ನ ಆರೋಗ್ಯಕ್ಕಿಂತ ಇನ್ಯಾವುದು ಮುಖ್ಯವಲ್ಲ. ಆದ್ದರಿಂದ ಅವರು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಅಲ್ಲದೆ ಕುಮಾರಸ್ವಾಮಿ ಬಿಜೆಪಿ ಜೊತೆ ಹೋದರೆ ಅವನು ನನ್ನ ಮಗನೇ ಅಲ್ಲ. ನಮ್ಮ ಕುಟುಂಬದಿಂದ  ಅವನಿಗೆ ಬಹಿಷ್ಕಾರ ಹಾಕುವುದಾಗಿ ಹೇಳಿದ್ದಾರೆ.

Leave a Reply

Your email address will not be published.