ಈ CMಗೆ ಏನೋ ಆಗಿದೆ, ಯಾವಾಗ ಏನು ಮಾತಾಡ್ತಾರೋ ಅವರಿಗೇ ಗೊತ್ತಾಗಲ್ಲ : ಶ್ರೀರಾಮುಲು

ಬಾಗಲಕೋಟೆ : ಹೈವೋಲ್ಟೇ ಜ್‌ ಕ್ಷೇತ್ರ ಎನಿಸಿಕೊಂಡಿರುವ ಬಾದಾಮಿಯಲ್ಲಿ ಇಂದು ಬಿಜೆಪಿ ನಾಯಕ ಶ್ರೀರಾಮುಲು ಪ್ರಚಾರ ಕೈಗೊಂಡಿದ್ದಾರೆ. ಹೊಸೂರು, ಜಾಲಿಹಾಳ, ಬೇಲೂರು ಗ್ರಾಮಗಳಲ್ಲಿ ರಾಮುಲು ಪಾದಯಾತ್ರೆ ನಡೆಸುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.

ಇದೇ ವೇಳೆ ಮಾತನಾಡಿದ ಶ್ರೀರಾಮುಲು, ಅಮಿತ್ ಶಾ, ಹೆಚ್. ಡಿ‌ ಕುಮಾರಸ್ವಾಮಿ ಒಳ ಒಪ್ಪಂದ ಮಾಡಿದ್ದಾರೆ ಎಂದಿದ್ದಾರೆ. ಆದರೆ ನಮಗೆ ಕುಮಾರಸ್ವಾಮಿ ಹೊಸಬರೇನಲ್ಲ. ನಾವು ಕುಮಾರಸ್ವಾಮಿ ಒಂದೆ ಶಾಲೆಯಲ್ಲಿ ಓದಿಕೊಂಡಿದ್ದೇವೆ. ನಾವೆಲ್ಲ ರಾಜಕಾರಣಿಗಳು ಒಂದೇ ಶಾಲೆಯಲ್ಲಿ ಓದಿ ಕೊಂಡಿದ್ದೇವೆ. ಸಿಎಂ ಸಿದ್ದರಾಮಯ್ಯ ಗೆ ಸೋಲಿನ ಭೀತಿ ಶುರುವಾಗಿದೆ. ಯಾವಾಗ ಏನು ಮಾತನಾಡುತ್ತಾರೆ ಅವರಿಗೆ ಗೊತ್ತಾಗೋದಿಲ್ಲ. ಆದ್ದರಿಂದ ರಾಜಕೀಯವಾಗಿ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

ಒಳ ಒಪ್ಪಂದ ಅಂತ ಏನೇನೊ ಮಾತನಾಡಿ ಜನರಲ್ಲಿ ಗದ್ದಲ ಎಬ್ಬಿಸುತ್ತಿದ್ದಾರೆ . ಐದು ವರ್ಷದಿಂದ ರಾಜ್ಯದಲ್ಲಿ ಗದ್ದಲ ಎಬ್ಬಿಸುತ್ತಲೇ ಇದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಜೆಡಿಎಸ್ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆ ಅದೇ ಸತ್ಯ ಎಂದಿದ್ದಾರೆ.

Leave a Reply

Your email address will not be published.