ನಾನೊಬ್ಬ ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದ್ರು ನಟಿ ಜಯಮಾಲಾ !

ತುಮಕೂರು : ನಾನು ಹಿಂದು ಅಂತ ಹೇಳಿಕೊಳ್ಳಲು ತುಂಬಾ ನೋವಾಗ್ತಿದೆ ಎಂದು ನಟಿ ಜಯಮಾಲಾ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ದೇಶದಲ್ಲಿ ಜಾತೀಯತೆ,ಕೋಮುವಾದ ತಾಂಡವವಾಡುತ್ತಿದೆ.,ಅಲ್ಲದೆ ಉತ್ತರಪ್ರದೇಶದಲ್ಲಿ ಹಿಂದೂ ಸಹೋದರರೇ ದೇವಸ್ಥಾನದ ಗರ್ಭಗುಡಿಯ ಎದುರೇ ಅತ್ಯಾಚಾರ ಎಸಗಿದ್ದಾರೆ. ಹೀಗಾಗಿ ನಾನು ಹಿಂದು ಅಂತ ಹೇಳಿಕೊಳ್ಳಲು ನನಗೆ ತುಂಬಾ ನೋವಾಗುತ್ತೆ ಎಂದಿದ್ದಾರೆ.


ಕೇಂದ್ರ ಸರ್ಕಾರ ಹಿಂದುತ್ವ‌ ಮತ್ತು ಕೋಮುವಾದದ ಹೆಸರಿನಲ್ಲಿ ಇಂತಹ ಕೆಲಸ ಮಾಡುತ್ತಿದೆ, ಅಲ್ಲದೆ ಈ ಎಲ್ಲಾ ಅತ್ಯಾಚಾರಕ್ಕೆ ಕೇಂದ್ರ ಸರ್ಕಾರ ಕಾರಣ ಅಂತ ನೇರ ಆರೋಪ ಮಾಡಿದ್ದಾರೆ.

Leave a Reply

Your email address will not be published.