ಸರ್ಕಾರಿ ಕೆಲಸಕ್ಕೆ ಅಲೆಯಬೇಡಿ, ಆಕಳನ್ನು ಸಾಕಿ ಇಲ್ಲವೇ ಪಾನ್ ಶಾಪ್ ತೆರೆಯಿರಿ : ತ್ರಿಪುರಾ CM

‘ ಸರ್ಕಾರೀ ಕೆಲಸಕ್ಕಾಗಿ ರಾಜಕೀಯ ಪಕ್ಷಗಳ ಹಿಂದೆ ವರ್ಷಗಟ್ಟಲೇ ಅಲೆಯುತ್ತ ಅಮೂಲ್ಯವಾದ ಸಮಯ ಹಾಳು ಮಾಡುವುದನ್ನು ಬಿಟ್ಟು, ಪಾನ್ ಶಾಪ್ ಅಂಗಡಿ ತೆರೆಯಿರಿ ‘ ಎಂದು ರಾಜ್ಯದ ವಿದ್ಯಾವಂತ, ನಿರುದ್ಯೋಗಿ ಯುವಕರಿಗೆ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಸಲಹೆ ನೀಡಿದ್ದಾರೆ.

‘ ಹಾಗೊಂದು ವೇಳೆ ಸ್ವಂತ ಉದ್ಯೋಗವನ್ನು ಅವಲಂಬಿಸಿದ್ದರೆ ಇಷ್ಟೊತ್ತಿಗೆ ನಿಮ್ಮ ನಿಮ್ಮ ಬ್ಯಾಂಕ್ ಖಾತೆಗಳಲ್ಲಿ 5 ಲಕ್ಷ ರೂಪಾಯಿಯಾದರೂ ಇರುತ್ತಿತ್ತು ‘ ಎಂದಿದ್ದಾರೆ. ಪ್ರಧಾನಮಂತ್ರಿಯವರ ಮುದ್ರಾ ಯೋಜನೆಯಡಿಯಲ್ಲಿ ಬ್ಯಾಂಕಿನಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಿ, ಆಕಳುಗಳನ್ನು ಸಾಕಿ ಹಾಲು ಮಾರಾಟ ಮಾಡಬಹುದು, ಪಾನ್ ಅಂಗಡಿ ತೆರೆಯಬಹುದು ‘ ಎಂದಿದ್ಧಾರೆ.

ರವಿವಾರ ಸೆಮಿನಾರ್ ಒಂದರಲ್ಲಿ ಮಾತನಾಡಿರುವ ಬಿಪ್ಲಬ್ ದೇಬ್ ‘ ಪ್ರತಿಯೊಂದು ಮನೆಯಲ್ಲಿಯೂ ಆಕಳನ್ನು ಸಾಕಬೇಕು, ಒಂದು ಲೀಟರ್ ಹಾಲಿಗೆ 50 ರುಪಾಯಿ ಬೆಲೆಯಿದೆ. 10 ವರ್ಷಗಟ್ಟಲೇ ನಿರುದ್ಯೋಗಿಯಾಗಿ ಮನೆಯಲ್ಲಿ ಕೂರುವ ಬದಲು ಹಾಲನ್ನಾದರೂ ಮಾರಿದ್ದರೆ ಬ್ಯಾಂಕ್ ಖಾತೆಯಲ್ಲಿ ಈಗ 10 ಲಕ್ಷ ದುಡ್ಡಿರುತ್ತಿತ್ತು ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com