ಮದುವೆಯಾಗಿ ಪತಿಯ ಮನೆಗೆ ಸೇರಬೇಕಾಗಿದ್ದ ವಧುವನ್ನು ಕರೆದೊಯ್ದ ಜವರಾಯ !!

ಲಖನೌ : ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ನವ ವಿವಾಹಿತರಿದ್ದ ವಾಹನದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ವಧುವನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಮಹ್ವಿಶ್‌  ಪರ್ವೀನ್‌ (18) ಎಂದು ಹೆಸರಿಸಲಾಗಿದೆ. ವಧು   ಪರ್ವೀನ್‌, ವರ ಮಹಮ್ಮದ್‌ ಷಾಝೆಬ್‌ ಹಾಗೂ ಇತರೆ ಮೂವರು ಕುಟುಂಬ ಸದಸ್ಯರು ಶುಕ್ರವಾರ ಗಾಜಿಯಾಬಾದ್‌ನ ನಹ್ಲಾ ಹಳ್ಳಿಯಲ್ಲಿ ಮದುವೆ ಮುಗಿಸಿಕೊಂಡು ಕಾರಿನಲ್ಲಿ ಮುಜಫರ್‌  ನಗರದ ಮನೆಗೆ ಹಿಂದಿರುಗುತ್ತಿದ್ದರು. ಮೀರತ್‌ ಜಿಲ್ಲೆಯ ಮಟೋರಾ ಗ್ರಾಮದ ಬಳಿ ಕಾರು ಹಗುತ್ತಿದ್ದಂತೆ  ನವದಂಪತಿಗಳಿದ್ದ ವಾಹನದ ಮೇಲೆ ಕಾರುಗಳಲ್ಲಿ ಶಸ್ತ್ರ ಸಜ್ಜಿತವಾದ 12 ಮಂದಿ ದರೋಡೆಕೋರರು ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನಲ್ಲಿದ್ದ ವಧು ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಹಣ, ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ.

ಗುಂಡೇಟು ಬಿದ್ದ ಪರ್ವೀನ್‌ನನ್ನು ಕೂಡಲೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿರುವುದಾಗಿ ತಿಳಿದುಬಂದಿದೆ.

ಈ ಕುರಿತು ಪೊಲೀಸರು ದರೋಡೆ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಹೆದ್ದಾರಿಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸುತ್ತಿದ್ದೇವೆ. ನವ ವಿವಾಹಿತರಿದ್ದ ವಾಹನವನ್ನು ಹಿಂಬಾಲಿಸುತ್ತಿದ್ದ ಕಾರಿನ ನಂಬರ್ ಪ್ಲೇಟ್  ನಂಬರ್ ನೋಂದಣಿಯಾಗಿದ್ದು, ಮೀರತ್ ಮೂಲದ ವ್ಯಾಪಾರಿ ಪ್ರದೀಪ್ ಬನ್ಸಾಲ್ ಹೆಸರಿನಲ್ಲಿ ಈ ಸಂಖ್ಯೆಯನ್ನ ನೋಂದಾಯಿಸಲಾಗಿದೆ ಎಂದು ಮೀರತ್ ನ ಎಸ್‍ಪಿ ದ್ವಿವೇದಿ ಹೇಳಿದ್ದಾರೆ.

Leave a Reply

Your email address will not be published.