ಗದಗ : ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸಿ ಎಂದ ಬಿಜೆಪಿ ನಾಯಕ……!!

ಗದಗ : ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಆಗಿ ಇಷ್ಟು ದಿನಗಳಾದರೂ ಇನ್ನೂ ಭಿನ್ನಮತ ಮುಗಿದಿಲ್ಲ. ಅಂತೆಯೇ ಶಿರಹಟ್ಟಿ ಕ್ಷೇತ್ರದಲ್ಲೂ ಭಿನ್ನಮತ ಮುಂದುವರಿದಿದ್ದು, ಬಿಜೆಪಿ ಪುರಸಭೆ ಸದಸ್ಯ ಪಕ್ಷದ ವೇದಿಕೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಬಿಜೆಪಿಯ ರಾಮಣ್ಣ ಲಮಾಣಿ ವಿರುದ್ಧ ಮತ ಹಾಕುವಂತೆ ಮುಂಡರಗಿ ಬಿಜೆಪಿ ಪುರಸಭೆ ಸದಸ್ಯ ಬಸವರಾಜ ರಾಮೆನಹಳ್ಳಿ ಪ್ರಚಾರ ಮಾಡುತ್ತಿದ್ದು, ಈ ಕುರಿತ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅಲ್ಲದೆ ಬಸವರಾಜ ಅವರು ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಗೆ ಮತ ಹಾಕಿ ಅಭಿವೃದ್ಧಿ ಸಹಕರಿಸಿ ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ.

Leave a Reply

Your email address will not be published.