ಸಿವಿಲ್‌ ಸರ್ವೀಸ್‌ಗೆ ಸಿವಿಲ್‌ ಇಂಜಿನಿಯರ್‌ಗಳು ಮಾತ್ರ ಸೂಕ್ತ : ತ್ರಿಪುರಾ CM

ಅಗರ್ತಲಾ : ಮಹಾಭಾರತ ಕಾಲದಲ್ಲಿ ಇಂಟರ್‌ನೆಟ್‌ ಇತ್ತು, ಐಶ್ವರ್ಯಾ ರೈ ಭಾರತವನ್ನು ಪ್ರತಿನಿಧಿಸುವ ನಾರಿಯೇ ಹೊರತು ಡಯಾನಾ ಹೆಡನ್‌ ಅಲ್ಲ ಎಂಬಂತದ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಎಲ್ಲರ ಕೈಯಲ್ಲಿ ಬೈಸಿಕೊಳ್ಳುತ್ತಿರುವ ತ್ರಿಪುರಾ ಸಿಎಂ ಮತ್ತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಮೊನ್ನೆಯಷ್ಟೇ ಯುಪಿಎಸ್‌ಸಿ ಫಲಿತಾಂಶ ಪ್ರಕಟವಾಗಿದೆ. ನೂರಾರು ಅಭ್ಯರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಈ ಕುರಿತು ತ್ರಿಪುರಾ ಸಿಎಂ ಪ್ರತಿಕ್ರಿಯೆ ನೀಡಿದ್ದು, ಸಿವಿಲ್‌ ಸರ್ವಿಸ್‌ ಎಕ್ಸಾಂಗಳನ್ನು ಸಿವಿಲ್ ಇಂಜಿನಿಯರ್‌ಗಳೇ ಬರೆಯಬೇಕು. ಅವರು ಬರೆದರೇ ಸೂಕ್ತ. ಮೆಕಾನಿಕಲ್‌ ಇಂಜಿನಿಯರ್‌ಗಳಲ್ಲ ಎಂದಿದ್ದಾರೆ.

ಈ ಹಿಂದೆ ಕಲಾವಿಭಾಗದ ವಿದ್ಯಾರ್ಥಿಗಳು ಸಿವಿಲ್‌ ಸರ್ವೀಸ್‌ ಪರೀಕ್ಷೆ ಬರೆಯುತ್ತಿದ್ದರು. ಆದರೆ ಈಗ ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯುತ್ತಿದ್ದಾರೆ. ಸಮಾಜ ಕಟ್ಟುವ ಕೆಲಸ ಮಾಡುವುದು ಇವರ ಕೆಲಸ. ಆದ್ದರಿಂದ ಇಂಜಿನಿಯರ್‌ಗಳೇ ಸಿವಿಲ್‌ ಸರ್ವೀಸ್‌ ಪರೀಕ್ಷೆ ಬರೆಯಬೇಕು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com