ಯುವಕರಿಗೆ ಪ್ರಾಶಸ್ತ್ಯ ನೀಡೋ BJP ವಯಸ್ಸಾಗಿರೋ BSYನ್ನು CM ಅಭ್ಯರ್ಥಿ ಮಾಡಿದ್ದೇಕೆ ?

ಬೆಳಗಾವಿ : ಬಿಜೆಪಿ ಪಕ್ಷವು ಯುವಕರಿಗೆ ಆದ್ಯತೆ ನಿಡುತ್ತಿದೆ ಎಂದು ಹೇಳುತ್ತದೆ. ಆದರೆ ಕರ್ನಾಟಕದಲ್ಲಿ ಹಿರಿಯ ವಯಸ್ಸಿನವರಾದ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದೇಕೆ ಎಂದು ಯುವತಿಯೋರ್ವಳು ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಪ್ರಶ್ನೆಯನ್ನು ಕೇಳಿದ ಸಂಗತಿ ಬೆಳಗಾವಿಯಲ್ಲಿ ನಡೆದಿದೆ.

ನಗರದ ಕೆಎಲ್‍ಇ ಸಂಸ್ಥೆಯ ಜೀರಗೆ ಸಭಾಭವನದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ನೇತೃತ್ವದಲ್ಲಿ ಕರುನಾಡ ಮಹಿಳಾ ಜಾಗೃತಿ ಸಂವಾದ ಆಯೋಜಿಸಲಾಗಿತ್ತು. ಈ ಸಂವಾದದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿ, ಯುವ ಸಮೂಹ ಬಿಜೆಪಿಯನ್ನು ಬೆಂಬಲಿಸುತ್ತದೆ. ಯುವ ನಾಯಕರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸುವ ಬದಲು ವಯಸ್ಸಾದ ಬಿ.ಎಸ್.ವೈ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ವೇದಿಕೆಯ ಮೇಲಿದ್ದ ಬಿಜೆಪಿಯ ಸಂಸದರಾದ ಸುರೇಶ ಅಂಗಡಿ, ಡಾ. ಪ್ರಭಾಕರ ಕೋರೆ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ವಿದ್ಯಾರ್ಥಿನಿಯ ಪ್ರಶ್ನೆಗೆ ಮುಜಗರ ಅನುಭವಿಸಿದ್ದಾರೆ.
ಕೆಲಹೊತ್ತು ತಬ್ಬಿಬ್ಬಾದರೂ, ಕ್ಷಣಾರ್ಧದಲ್ಲಿ ಸುಧಾರಿಸಿಕೊಂಡ ಸ್ಮೃತಿ ಇರಾನಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ವಯಸ್ಸಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ವಯಸ್ಸಾಗಿದೆ. ರಾಜಕೀಯವಾಗಿ ಅನುಭವ ಇರುವ ಬಿ.ಎಸ್‍ವೈ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ಈ ಹಿಂದೆ ಉತ್ತರ ಪ್ರದೇಶದಲ್ಲಿ ಅಖೀಲೇಶ ಯಾದವ್ ಅವರು ಸಿಎಂ ಆಗಿದ್ದರು. ಅನುಭವದ ಕೊರತೆಯಿಂದ ಅವರಿಂದ ನಿರೀಕ್ಷಿತ ಪ್ರಮಾಣದಲ್ಲಿ ಅಲ್ಲಿ ಅಭಿವೃದ್ಧಿ ಆಗಲಿಲ್ಲ. ಸಿಎಂ ಆಗಲು ಅನುಭವಬೇಕು ಎಂದು ಬಿ.ಎಸ್.ವೈ ಆಯ್ಕೆಯನ್ನು ಸಮರ್ಥಿಸಿಕೊಂಡರು.

Leave a Reply

Your email address will not be published.

Social Media Auto Publish Powered By : XYZScripts.com