ಸಂಚಾರಿ ನಿಯಮ ಪಾಲಿಸಿಲ್ಲ ಅಂತ ಬೈಕ್‌ ಸವಾರರಿಗೆ ಚಪ್ಪಲಿಯಲ್ಲಿ ಹೊಡೆದ ಪೇದೆ : ವಿಡಿಯೋ ವೈರಲ್‌

ಬೆಂಗಳೂರು : ಬೆಂಗಳೂರಿನ ಟ್ರಾಫಿಕ್‌ ಪೊಲೀಸ್‌ ಒಬ್ಬರು ಯಡವಟ್ಟು ಮಾಡಿಕೊಂಡಿದ್ದಾರೆ. ಸಂಚಾರಿ ನಿಯಮಗಳನ್ನು ಪಾಲಿಸದೇ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರ ಮೇಲೆ ಶೂ ಎಸೆದ ಪೇದೆಯೊಬ್ಬರು ಈಗ ಸುದ್ದಿಯಾಗಿದ್ದಾರೆ.

ನ್ಯೂ ಬಿಇಎಲ್ ರಸ್ತೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಚಿಕ್ಕಜಾಲ ಸಂಚಾರಿ ಪೊಲೀಸ್‌ ಠಾಣೆಯ ಸಿಬ್ಬಂದಿ ಗಸ್ತಿನಲ್ಲಿದ್ದ ವೇಳೆ ಯುವಕರಿಬ್ಬರು ಬೈಕ್‌ನಲ್ಲಿ ಹೆಲ್ಮೆಟ್‌ ಇಲ್ಲದೆ ಸಂಚರಿಸುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದವರ ಪರಿಶೀಲನೆ ನಡೆಸುತ್ತಿದ್ದ ಪೇದೆಯೊಬ್ಬರು, ಬೈಕ್‌ನಲ್ಲಿ ತೆರಳುತ್ತಿದ್ದ ಲಾಹನ ಸವಾರರ ಮೇಲೆ ಶೂ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕಾರಿನಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಈಗ ಈ ವಿಡಿಯೋವನ್ನು ಯೂಟ್ಯೂಬ್‌ಗೆ ಹಾಕಲಾಗಿದೆ.

ನಿಯಮ ಉಲ್ಲಂಘಿಸಿದ್ದಕ್ಕೆ ಚಪ್ಪಲಿಯಲ್ಲಿ  ಹೊಡೆಯುವುದು ಎಂತಾ ನ್ಯಾಯ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ಸಂಚಾರಿ ಪೊಲೀಸರ ವಿರುದ್ದ ಗುಡುಗಿದ್ದಾರೆ.

Leave a Reply

Your email address will not be published.