JDS ಅಭ್ಯರ್ಥಿ ಶ್ರೀಧರ್ ರೆಡ್ಡಿ ಹತ್ಯೆಗೆ ಸಂಚು …? ಲಾಂಗ್‌ ಸಹಿತ ಆರೋಪಿ ಅರೆಸ್ಟ್‌

ಬೆಂಗಳೂರು : ಶಾಂತಿನಗರ ಜೆಡಿಎಸ್‌ ಅಭ್ಯರ್ಥಿ ಶ್ರೀಧರ್‌ ರೆಡ್ಡಿ ಅವರ ಮನೆ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ  ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ಬಂಧಿತನ ಬಳಿ ಇದ್ದ ಲಾಂಗನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಫಜರ್‌ ಖಾನ್ ಎಂದು ಹೆಸರಿಸಲಾಗಿದ್ದು, ಈತ ಜೆಡಿಎಸ್‌ ಮುಖಂಡ ಶ್ರೀಧರ್‌ ರೆಡ್ಡಿ ಅವರ ಬಗ್ಗೆ ಯಾವಾಗ ಮನೆಗೆ ಬರುತ್ತಾರೆ ಎಂದು ವಿಚಾರಿಸಿದ್ದಲ್ಲದೆ, ಅವರ ಮನೆಯ ಬಳಿಯೇ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೆ ಅಲ್ಲಿದ್ದ ಶ್ರೀಧರ್‌ ರೆಡ್ಡಿ ಬೆಂಬಲಿಗರು ಆತನನ್ನು ಹಿಡಿದು ವಿಚಾರಿಸಿದಾಗ ಆತನ ಸ್ಕೂಟರ್‌ನಲ್ಲಿ ಲಾಂಗ್‌ ಹಾಗೂ ಗಾಂಜಾ ಪತ್ತೆಯಾಗಿದೆ.  ಈತ ಶ್ರೀಧರ್‌ ರೆಡ್ಡಿ ಅವರ ಹತ್ಯೆಗೆ ಸ್ಕೆಚ್‌ ಹಾಕಿದ್ದನೆ ಎಂಬ ಸಂಶಯ ಮೂಡಿದ್ದು, ಅಶೋಕನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

 

Leave a Reply

Your email address will not be published.