ಬಾಹುಬಲಿ-2 ರಿಲೀಸ್ ಗೆ ವರ್ಷದ ಸಂಭ್ರಮ : ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಪ್ರಭಾಸ್

ಪ್ರಭಾಸ್, ಅನುಷ್ಕಾ ಶೆಟ್ಟಿ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿ-2 ಬಿಡುಗಡೆಗೊಂಡು ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ಈ ವಿಶೇಷ ಸಂದರ್ಭದಲ್ಲಿ ಬಾಹುಬಲಿ ಚಿತ್ರದ ನಾಯಕ ನಟ ಪ್ರಭಾಸ್ ತಮ್ಮೆಲ್ಲ ಅಭಿಮಾನಿಗಳಿಗೆ, ಚಿತ್ರತಂಡದವರಿಗೆ ಧನ್ಯವಾದ ಹೇಳಿದ್ದಾರೆ.

ಕಳೆದ ವರ್ಷ ಏಪ್ರಿಲ್ 29 ರಂದು ತೆರೆ ಕಂಡಿದ್ದ ಬಾಹುಬಲಿ – 2 ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಿತ್ತು. ತೆಲುಗಿನ ಖ್ಯಾತ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಈಗ ಜಪಾನ್ ದೇಶದಲ್ಲಿಯೂ 100 ದಿನಗಳನ್ನು ಪೂರೈಸಿದೆ.

ಈ ವೇಳೆ ತಮ್ಮ ಸಂತಸವನ್ನು ಹಂಚಿಕೊಂಡಿರುವ ಪ್ರಭಾಸ್, ‘ ನಮ್ಮ ಬಾಹುಬಲಿ-2 ಚಿತ್ರ ಇಂದಿಗೆ 1 ವರ್ಷ ಪೂರ್ಣಗೊಳಿಸಿದೆ. ಈ ದಿನ ನನ್ನ ಪಾಲಿಗೆ ಯಾವಾಗಲೂ ವಿಶೇಷವಾಗಿರಲಿದೆ. ನನ್ನೆಲ್ಲ ಅಭಿಮಾನಿಗಳಿಗೆ ಅಪಾರ ಧನ್ಯವಾದ ಹೇಳುತ್ತೇನೆ. ಬಾಹುಬಲಿ ಚಿತ್ರ ನಿರ್ಮಾಣದ ಭಾವನಾತ್ಮಕ ಹಾಗೂ ಸುಂದರವಾದ ಪಯಣದಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ಧನ್ಯವಾದಗಳು ‘ ಎಂದು ಹೇಳಿದ್ದಾರೆ.

One thought on “ಬಾಹುಬಲಿ-2 ರಿಲೀಸ್ ಗೆ ವರ್ಷದ ಸಂಭ್ರಮ : ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಪ್ರಭಾಸ್

Leave a Reply

Your email address will not be published.

Social Media Auto Publish Powered By : XYZScripts.com