ರಾಹುಲ್ ಗೆ ದೇವಸ್ಥಾನದಲ್ಲಿ ಕೊಟ್ಟ ತೀರ್ಥ ಹೇಗೆ ಕುಡಿಯಬೇಕೋ ಗೊತ್ತಿಲ್ಲ : ಅನಂತಕುಮಾರ್ ಹೆಗ್ಡೆ

ಬೆಳಗಾವಿ : ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ ಧರ್ಮದ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡಿಲ್ಲಾ. ರಾಹುಲ್ ಗಾಂಧಿಗೆ ದೇಶದಲ್ಲಿ ಹಿಂದು ಧರ್ಮ ಇದೆ ಅಂತ ಈಗ ನೆನಪಾಗಿದೆ. ಆ ಕಾರಣಕ್ಕಾಗಿ ಎಲ್ಲಾ ದೇವಾಲಯ ಮಠಗಳಿಗೆ ಹೊಗ್ತಾ ಇದ್ದಾರೆ ‘

‘ ರಾಹುಲ್ ಗಾಂಧಿಗೆ ದೇವಸ್ಥಾನದಲ್ಲಿ ಕೊಟ್ಟ ತೀರ್ಥವನ್ನು ಹೇಗೆ ಕುಡಿಯಬೇಕೋ ಗೊತ್ತಿಲ್ಲಾ. ರಾಹುಲ್ ಗಾಂಧಿಗೆ ಯಾರೋ ಹೇಳಿದ್ರೂ ಅಂತ ದೇವಸ್ಥಾನಕ್ಕೆ ಕಾವಿ ಬಟ್ಟೆ ಹಾಕಿಕೊಂಡು ಹೋದ, ಮಠಕ್ಕೆ ರುದ್ರಾಕ್ಷಿ, ಮಸೀದಿಗೆ, ಕೊಳಿ ಪುಕ್ಕ, ಚರ್ಚ್ ಕೊರಳಲ್ಲಿ ಸಿಲುಭೆ ಕಟ್ಟಿಕೊಂಡ ಹೋದ ‘ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

‘ಈಗ ದೇಶದ ಅತ್ಯಂತ ದೊಡ್ಡ ಶ್ರದ್ಧಾಕೆಂದ್ರ ಶ್ರವಣಬೆಳಗೊಕ್ಕೆ ಹೋಗಿ ಬನ್ನಿ. ಪರೋಕ್ಷವಾಗಿ ರಾಹುಲ್ ಗಾಂಧಿಗೆ ಬರಿ ಮೈಯಲ್ಲಿ ಹೋಗಿ ಎಂದು ವ್ಯೆಂಗ್ಯ ಕೇಂದ್ರ ಸಚಿವ ವ್ಯಂಗ್ಯ ಮಾಡಿದ್ದಾರೆ.

‘ನಾಟಕ ಮಾಡೋ ಮಂದಿಗೆ ಪ್ರಮಾಣಿಕತೆ ಇಲ್ಲಾ. ಈ ನಾಟಕ ಕಂಪನಿ ಕಳೇದ 70 ವರ್ಷಗಳಿಂದ ಆಳಿದೆ. ಮುಂದಿನ ದಿನಗಳಲ್ಲಿ ಈ ನಾಟಕದ ಕಂಪನಿ ನಮ್ಮ ದೇಶದಲ್ಲಿ ಇರಬಾರದು. ಎಲ್ಲಿ ತನಕ ಈ ದೇಶದಲ್ಲಿ ಕಾಂಗ್ರೆಸ್ ಇರುತ್ತೋ ಅಲ್ಲಿವರೆಗು ಈ ದೇಶಕ್ಕೆ ಭವಿಷ್ಯ ಇಲ್ಲಾ. ಲೂಟಿ ಮಾಡೋದು ಧರ್ಮಕ್ಕೆ ಅವಮಾನ ಮಾಡೋದು ಇವರ ಕೆಲಸ ‘ ಎಂದಿದ್ದಾರೆ.

3 thoughts on “ರಾಹುಲ್ ಗೆ ದೇವಸ್ಥಾನದಲ್ಲಿ ಕೊಟ್ಟ ತೀರ್ಥ ಹೇಗೆ ಕುಡಿಯಬೇಕೋ ಗೊತ್ತಿಲ್ಲ : ಅನಂತಕುಮಾರ್ ಹೆಗ್ಡೆ

Leave a Reply

Your email address will not be published.