ಮುಸ್ಲೀಮರು CM ಗೆ ವೋಟಿನ ಜೊತೆ ತೊಟ್ಟು ರಕ್ತವನ್ನು ಕೊಡ್ತಾರೆ : ಜಮೀರ್ ಅಹ್ಮದ್‌

ಮೈಸೂರು : ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಕಾಂಗ್ರೆಸ್‌ ನಾಯಕ ಜಮೀರ್ ಅಹಮದ್ ಹೇಳಿದ್ದಾರೆ.

ಮೈಸೂರಿನಲ್ಲಿಂದು ಸಿಎಂ ಪರ ಪ್ರಚಾರ ಮಾಡಿದ ಜಮೀರ್ ಅಹ್ಮದ್‌,  ಮುಸ್ಲೀಮರು ಸಿದ್ದರಾಮಯ್ಯನವರಿಗೆ ಒಂದು ವೋಟು ಕೊಟ್ಟು ತೊಟ್ಟು ರಕ್ತವನ್ನೂ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ರಾಮನಗರದಲ್ಲಿ ಕುಮಾರಸ್ವಾಮಿಯವರ ಸೋಲು ಖಚಿತ. ಚನ್ನಪಟ್ಟಣದಲ್ಲಿ , ರಾಮನಗರದಲ್ಲಿ  ಕ್ಷೇತ್ರಗಳು ಕುಮಾರಸ್ವಾಮಿಗೆ ದಕ್ಕಲ್ಲ. ಈ ಗಲೇ ಕುಮಾರಸ್ವಾಮಿ ಅಲ್ಲಾಡುತ್ತಿದ್ದಾರೆ. ಇನ್ನು ಚಾಮರಾಜಪೇಟೆಯಲ್ಲಿ  ನನ್ನನ್ನು ಸೋಲಿಸುವುದು ಅಸಾಧ್ಯ. ಜೆಡಿಎಸ್‌ -ಬಿಜೆಪಿಯ ಒಳ ಮೈತ್ರಿ ಜನರಿಗೆ ಈಗಾಗಲೆ ಅರ್ಥವಾಗಿದೆ ಎಂದಿದ್ದಾರೆ.

Leave a Reply

Your email address will not be published.