ಡಯಾನಾ ಸುಂದರಿ ಅಲ್ಲ ಎಂದಿದ್ದ ತ್ರಿಪುರಾ ಸಿಎಂಗೆ ಮಾಜಿ ಮಿಸ್‌ ವರ್ಲ್ಡ್‌ ತಿರುಗೇಟು

ಅಗರ್ತಲಾ : ಐಶ್ವರ್ಯಾ ರೈ ದೇಶಕ್ಕೆ ಮಾದರಿ ನಾರಿ, ಆದರೆ ಡಯಾನಾ ಹೆಡನ್‌ ಅಲ್ಲ ಎಂದಿದ್ದ ತ್ರಿಪುರಾ ಸಿಎಂ ಬಿಪ್ಲಬ್‌ ದೇಬ್‌ಗೆ ಮಾಜಿ ಮಿಸ್‌  ವರ್ಲ್ಡ್‌ ಡಯಾನಾ ತಿರುಗೇಟು ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಡಯಾನಾ, ನಾನು ಚಿಕ್ಕವಯಸ್ಸಿನಿಂದಲೇ ಕಂದು ಬಣ್ಣ ಎಂದು ಹೀಯಾಳಿಸುವವರ ವಿರುದ್ದ ಹೋರಾಡುತ್ತಲೇ ಬಂದಿದ್ದೇನೆ. ಅದರಲ್ಲಿ ನನಗೆ ಯಶಸ್ಸೂ ಸಿಕ್ಕಿದೆ. ನನ್ನದು ಕಂದು ಬಣ್ಣ ಹೀಯಾಳಿಸಿ ಬಿಪ್ಲಬ್‌ ದೇಬ್‌ ಅವಮಾನಿಸಿದ್ದಾರೆ. ಈ ಹೇಳಿಕೆಯಿಂದ ನನಗೆ ನೋವಾಗಿದೆ ಎಂದಿದ್ದಾರೆ.

ಅಲ್ಲದೆ ಅವರು ಒಂದು ರಾಜ್ಯದ ಸಿಎಂ, ದೊಡ್ಡ ಹುದ್ದೆಯಲ್ಲಿರುವವರು. ಮಾತನಾಡುವ ಮುನ್ನ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು ಎಂದಿದ್ದಾರೆ.

ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ತ್ರಿಪುರಾ ಸಿಎಂ ಬಿಪ್ಲಬ್‌ ದೇಬ್‌, ನಟಿ ಐಶ್ವರ್ಯಾ ರೈ ಸುಂದರಿ, ಅವರು ಭಾರತೀಯ ನಾರಿಯರನ್ನು ಪ್ರತಿನಿಧಿಸುತ್ತಾರೆಯೇ ವಿನಃ ಡಯಾನಾ ಹೆಡನ್‌ ಅಲ್ಲ ಎಂದಿದ್ದರು.  ಈ ಹೇಳಿಕೆ ಎಲ್ಲೆಡೆ ವಿವಾದಕ್ಕೆ ಕಾರಣವಾಗಿದ್ದು, ಈಗ ಸಿಎಂಗೆ ಡಯಾನಾ ತಿರುಗೇಟು ನೀಡಿದ್ದಾರೆ.

Leave a Reply

Your email address will not be published.