ಮೋದಿಯವರೇ ನಿಮಗೆ ತೀಟೆ ತೀರಿಸಿಕೊಳ್ಳೋಕೆ ಕರ್ನಾಟಕ ಬೇಕಾ : ಪ್ರಕಾಶ್ ರೈ ಪ್ರಶ್ನೆ

ಮಂಗಳೂರು : 2019 ರ ಬಳಿಕ ಮೋದಿ ನಿರುದ್ಯೋಗಿ ಆಗ್ತಾರೆ.  ಆ ನಂತ್ರ ಕರ್ನಾಟಕಕ್ಕೆ ಬಂದು ಕನ್ನಡ ಕಲಿಯಲಿ ಎಂದು ಟಾಂಗ್ ಕೊಟ್ಟಿದ್ದಾರೆ.

ಬಂಟ್ವಾಳದಲ್ಲಿ ಸಂವಿಧಾನ ಉಳಿವಿಗೆ ಸ್ವಾಭಿಮಾನಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ನಟ ಪ್ರಕಾಶ್ ರೈ, ಮೋದಿ 2019ರ ನಂತರ ಕರ್ನಾಟಕಕ್ಕೆ ಬಂದು ಕನ್ನಡ ಕಲಿಯಲಿ. ಆದ್ರೆ ವಯಸ್ಕರ ಶಿಕ್ಷಣ ಕೇಂದ್ರಕ್ಕೆ ಸೇರಬೇಕು. ಶಾಲಾ ಮಕ್ಕಳ ಜೊತೆಗೆ ನಿಮ್ಮ ಸ್ಥಾನ ಇಲ್ಲ ಎಂದು ವ್ಯಂಗ್ಯವಾಡಿದರು.

ನಿಮಗೆ ತೀಟೆ ತೀರಿಸೋಕೆ ಕರ್ನಾಟಕ ಬೇಕು . ಪ್ರಧಾನಿ ಮೋದಿಗೆ ಮತಿಭ್ರಮಣೆಯಾಗಿದೆ. ಯಾರೋ ನೆಹರು, ಟಿಪ್ಪು ಹಿಂದೆ ಏನೋ ಮಾಡಿ ಹೋಗಿದ್ದರೆ ಅದರ ವಿಚಾರ ನಮಗೇಕೆ. ದೇಶದ ಜನತೆಗೆ ಅಭಿವೃದ್ಧಿ ವಿಚಾರದ ಬಗ್ಗೆ ಹೇಳಿ. ಸುಳ್ಳನ್ನೇ ಹೇಳುವ ಜಾಯಾಮಾನದವರು ಬಿಜೆಪಿಯವರು. ಬೆದರು ಗೊಂಬೆಗಳ ತರಹ  ಬಿಜೆಪಿಯಿದೆ . ಬಿಜೆಪಿ ಪಕ್ಷಕ್ಕೆ ಸಿದ್ಧಾಂತ ಎಂಬುದೇ ಇಲ್ಲ. ಅದು ಆರ್ ಎಸ್ಎಸ್ ಹೇಳಿದಂತೆ ಕೇಳುವ ಪಕ್ಷ ಎಂದು ಪ್ರಕಾಶ್ ರೈ ಕಿಡಿಕಾರಿದರು

Leave a Reply

Your email address will not be published.

Social Media Auto Publish Powered By : XYZScripts.com