ಹೆಣ್ಣು ಮಕ್ಕಳನ್ನು ಮರ್ಯಾದೆಯಿಂದ ನೋಡದ ಪಕ್ಷ ಬಿಜೆಪಿ : ನಟ ಪ್ರಕಾಶ್‌ ರೈ

ಮಂಗಳೂರು : ದಕ್ಷಿಣದ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಪತ್ನಿ ಹಿಂದುತ್ವದ ಹೆಸರಲ್ಲಿ ಓಟ್ ಕೇಳಿದ್ದಕ್ಕೆ ನಟ ಪ್ರಕಾಶ್ ರೈ ವಿರೋಧ ವ್ಯಕ್ತಪಡಿಸಿದ್ದಾರೆ.

ವೇದವ್ಯಾಸ್ ಪತ್ನಿ ಪತಿಯ ಪರವಾಗಿ ಓಟ್ ಕೇಳುವಾಗ ಹಿಂದುತ್ವ ಉಳಿವಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಕೇಳಿದ್ದರು. ಈ ವಿಚಾರವನ್ನು ಬಂಟ್ವಾಳದಲ್ಲಿ ನಡೆದ ಸಂವಿಧಾನ ಉಳಿಸಿ ಸಮಾವೇಶದಲ್ಲಿ ಪ್ರಸ್ತಾಪಿಸಿದ ಪ್ರಕಾಶ್ ರೈ, ಧರ್ಮದ ಹೆಸರಲ್ಲಿ ವಿಂಗಡಿಸಿ ಓಟ್ ಕೇಳಬೇಡಿ. ಪ್ರಜಾಪ್ರಭುತ್ವದಲ್ಲಿ ಜಾತಿ ಧರ್ಮದ ಹೆಸರಲ್ಲಿ ಓಟು ಕೇಳುವ ಹಾಗಿಲ್ಲ ಎಂದರು. ಹಿಂದೂ ಧರ್ಮವನ್ನು ಯಾರು ಗುತ್ತಿಗೆ ತೆಗೆದುಕೊಂಡಿಲ್ಲ.  ಧರ್ಮದ ಹೆಸರಲ್ಲಿ ರಾಜಕೀಯ ಮಾಡಬಾರದು. ಬಿಜೆಪಿ ಹೆಂಗಸರನ್ನು ಮರ್ಯಾದೆಯಿಂದ ನೋಡದ ಪಕ್ಷ ಎಂದು ಪ್ರಕಾಶ್ ರೈ ಕಿಡಿಕಾರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com