ನಿಖಿಲ್ ಕುಮಾರಸ್ವಾಮಿ ಸಿಡಿ ಬಿಡುಗಡೆ ವಿಚಾರ : ಬಾಲಕೃಷ್ಣಗೆ ಸವಾಲ್ ಹಾಕಿದ ಅಪ್ಪ-ಮಗ !!
ಮಂಡ್ಯ : ನಿಖಿಲ್ ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡುತ್ತೀನಿ ಎಂದಿರುವ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ನಿಖಿಲ್ ಸವಾಲೆಸೆದಿದ್ದಾರೆ.
ಈ ಸಂಬಂಧ ಮಂಡ್ಯದಲ್ಲಿ ಮಾತನಾಡಿದ ಎಚ್ಡಿಕೆ, ಬಾಲಕೃಷ್ಣ ಅದೆಂಥಾ ಬಾಂಬ್ ಸಿಡಿಸ್ತಾರೋ ನಾನೂ ನೋಡ್ತೀನಿ. ನಿಖಿಲ್ ಬಗ್ಗೆ ಸಿಡಿ ಇದ್ದರೆ ಬಿಡುಗಡೆ ಮಾಡಲಿ, ಅದೆಂತಾ ಸಿ ಡಿ ಅಂತ ನೋಡಲೇಬೇಕು ಎಂದಿದ್ದಾರೆ.
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ನಿಖಿಲ್ ಕುಮಾರಸ್ವಾಮಿ, ನನ್ನ ಜಾತಕ ಬಯಲು ಮಾಡ್ತೀರ, ತಾಕತ್ ಇದ್ರೆ ಹೇಳಿ ನೋಡಣ, ನಾನು ಯಾವನಿಗೂ ಹೆದರಲ್ಲ. ಹೆದರುವಂತದ್ದು ನಾನೇನೂ ಮಾಡಿಲ್ಲ. ರಾಜ್ಯದ ಆರೂವರೆ ಕೋಟಿ ಜನಕ್ಕೆ ಬಾಲಕೃಷ್ಣನ ಯೋಗ್ಯತೆ ಏನು ಅಂತ ಗೊತ್ತಿದೆ. ನನಗೆ ಹೇಳೋ ಯೋಗ್ಯತೆ ಅವರಿಗಿಲ್ಲ ಎಂದಿದ್ದಾರೆ.