ಜಮ್ಮು-ಕಾಶ್ಮೀರದಲ್ಲಿ ತಹಶೀಲ್ದಾರ್‌ ಹುದ್ದೆಗಾಗಿ ಪರೀಕ್ಷೆ ಬರೆಯಲಿದೆ ಗೋಧಿ ಬಣ್ಣದ ಕತ್ತೆ……!!

ಶ್ರೀನಗರ : ಜಮ್ಮುಕಾಶ್ಮೀರದ  ಸ್ಪರ್ಧಾತ್ಮಕ ಪರೀಕ್ಷೆಯೊಂದರಲ್ಲಿ ಕತ್ತೆಗೂೀ ಹಾಲ್‌ ಟಿಕೆಟ್‌ ನೀಡಲಾಗಿದೆ.

ಹೌದು ಜಮ್ಮು-ಕಾಶ್ಮೀರದಲ್ಲಿ ತಹಶೀಲ್ದಾರ್‌ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಇದಕ್ಕಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅದಕ್ಕೆ ಸಂಬಂಧಿಸಿದ ಹಾಲ್ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ. ವಿಚಿತ್ರ ಎಂದರೆ ಈ ಬಾರಿ ಕತ್ತೆಯೂ ತಹಶೀಲ್ದಾರ್‌ ಪರೀಕ್ಷೆ ಬರೆಯುತ್ತಿದೆ. ಹಾಲ್‌ಟಿಕೆಟ್‌ ಒಂದರಲ್ಲಿ ಕತ್ತೆಯ ಹೆಸರಿನ ಜೊತೆ ಫೋಟೋ ಸಹ ಇದ್ದು ಸೋಶಿಯಲ್‌ ಮೀಡಿಯಾದಲ್ಲಿ ಈ ಹಾಲ್‌ ಟಿಕೆಟ್‌ ವೈರಲ್‌ ಆಗಿದೆ.

ಈ ಹಾಲ್‌ ಟಿಕೆಟ್‌ನಲ್ಲಿ ಅಭ್ಯರ್ಥಿಯ ಸಹಿ ಜೊತೆ ಜಮ್ಮುಕಾಶ್ಮೀರ ಸರ್ವೀಸಸ್‌ ಸೆಲೆಕ್ಷನ್ ಮಂಡಳಿ ಸೆಕ್ರೆಟರಿ ಸಹಿ ಸಹ ಬಿದ್ದಿದೆ. ಹೆಸರಿನ ಜಾಗದಲ್ಲಿ ಕಚೌರ್‌ ಕುಮಾರ್ ಎಂದು ಇದ್ದು, ಇದರ ಅರ್ಥ ಗೋಧಿ ಬಣ್ಣದ ಕತ್ತೆ ಎಂದು ಅರ್ಥ.

ಕತ್ತೆಗೆ ಹಾಲ್ ಟಿಕೆಟ್‌ ಏನೋ ನೀಡಿದ್ದಾರೆ. ಆದರೆ ಕತ್ತೆ ಪರೀಕ್ಷೆ ಬರೆಯುತ್ತಾ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗಾಗಿದೆ. ಕತ್ತೆ ಬರೆದು ಪಾಸಾಗಲಿ ಬಿಡಿ ಎಂಬಂತಹ ಕಮೆಂಟ್‌ಗಳು ಕೇಳಿಬಂದಿವೆ.

Leave a Reply

Your email address will not be published.

Social Media Auto Publish Powered By : XYZScripts.com