ಬಿಜೆಪಿಯವರಿಗೆ ನನ್ನ ಜೊತೆ ಚರ್ಚೆ ಮಾಡಲು ಧಮ್‌ ಇಲ್ಲ : CM ಸಿದ್ದರಾಮಯ್ಯ

ಕೊಡಗು : ಕೊಡಗಿನ ಜನ ವಿಶ್ವಾಸಕ್ಕೆ ಸ್ನೇಹಕ್ಕೆ ಅರ್ಹರು, ಮೋದಿಯದ್ದು ಕೇವಲ ಬಾಯಿ ಬಡಾಯಿಯಾಯಿತೇ ಹೊರತು ಸಾಧನೆ ಮಾತ್ರ ಶೂನ್ಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೊಡಗಿನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರ್ಕಾರದ ಮೇಲೆ ಆಧಾರ ರಹಿತ ಆರೋಪ ಮಾಡುತ್ತಾರೆ. ನಿಮಗೆ ತಾಕತ್‌ ಇದ್ದರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ಬಿಜೆಪಿಯವರಿಗೆ ಸವಾಲು ಹಾಕಿದ್ದೆ. ಆದರೆ ಅವರ್ಯಾರಿಗೂ ಬರಲು ದಮ್‌ ಇಲ್ಲ ಎಂದು ಅಣಕವಾಡಿದ್ದಾರೆ.

ವಿಯೆಟ್ನಾಂ ಕಾಳುಮೆಣಸು ಹಗರಣಕ್ಕೆ ಅಮಿತ್ ಶಾ ಮಗನೇ ಕಾರಣ. ಮೋದಿಯದ್ದು ಬರೀ ಮನ್‌ ಕಿ ಬಾತ್‌ ,ಕಾಮ್‌ ಕಿ ಬಾತ್‌ ನಹಿ  ಎಂದು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com