ಕಾಂಗ್ರೆಸ್‌ ಪಕ್ಷ ಮುಸ್ಲೀಮರನ್ನು ದತ್ತುಪಡೆದಂತೆ ಮಾತಾಡುತ್ತಿದೆ : ವ್ಯಂಗ್ಯ ಮಾಡಿದ HDD

ಹಾಸನ : ಪ್ರಧಾನಿಯಾದ ಒಂದು ವರ್ಷ ಮೋದಿಗೆ ಇದ್ದ ವರ್ಚಸ್ಸು ಈಗಿಲ್ಲ ಎಂದು ಎಚ್ ಡಿ ದೇವೇಗೌಡರು ಟಾಂಗ್ ನೀಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು ಚುನಾವಣಾ ಪ್ರಚಾರಕ್ಕೆ ಯಾರು ಬೇಕಾದರೂ ಬರಲಿ ಆದರೆ ಮೋದಿಗೆ ಮೊದಲಿದ್ದ ವರ್ಚಸ್ಸು ಈಗಿಲ್ಲ. ಈಗ ಬಂದು ಭಾಷಣ ಮಾಡಿ ಹೋದರೆ ನಮ್ಮ ಪ್ರಾದೇಶಿಕ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಸ್ಪಷ್ಟಪಡಿಸಿದರು .

ಇನ್ನೊಮ್ಮೆ ಐದು ಮತ್ತು ಆರನೇ ತಾರೀಖು ಮಾಯಾವತಿ ಕರ್ನಾಟಕಕ್ಕೆ ಆಗಮಿಸುತ್ತಿದ್ದು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಪ್ರಚಾರ ಮಾಡ್ತಾರೆ. ಜೊತೆಗೆ ಓವೈಸಿ ಪಕ್ಷದವರು ಕೂಡ ಬಂದು ಎರಡು ದಿನ ಪ್ರಚಾರ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ತಮ್ಮ ವೈಯಕ್ತಿಕ ಪ್ರಕರಣಗಳನ್ನು ತಪ್ಪಿಸ್ಕೊಳ್ಳೋದಕ್ಕೆ  ಲೋಕಾಯುಕ್ತವನ್ನು ಮುಚ್ಚಿ ಹಾಕಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಭ್ರಷ್ಟಾಚಾರದ ಆರೋಪ ಮಾಡ್ಕೊಂಡು ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿವೆ. ನಾನೂ ಕೂಡ ಸಾಕಷ್ಟು ಪ್ರಣಾಳಿಕೆ ಬಿಡುಗಡೆ ಮಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ಕುಮಾರಸ್ವಾಮಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಜಮೀರ್ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲಾರೆ ಅವರ ಹೆಸರನ್ನು ಕೂಡ ನಾನು ಪ್ರಸ್ತಾಪಿಸಲಾರೆ. ಜೆಡಿಎಸ್ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲಿ ಸೀಮಿತ ಎಂಬ ಸಿಎಂ ಮಾತಿಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಹಾಗಿದ್ರೆ ಬಾದಾಮಿಗೆ ಸಿಎಂ ಯಾಕೆ ಹೋದ್ರು ಎಂಬುದನ್ನು ಸ್ಪಷ್ಟಪಡಿಸಲಿ. ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ದತ್ತು ಪಡೆದಿದೆಯಾ? ಡಿಕೆಶಿ ಹಾಸನಕ್ಕೆ ಬರಲಿ, ನನ್ನದೇನು ಅಭ್ಯಂತರ ಇಲ್ಲ. ವೀಸಾ ಪಾಸ್ ಬೇಕಿಲ್ಲ ಅಂತ ವ್ಯಂಗ್ಯವಾಡಿದರು.

Leave a Reply

Your email address will not be published.