ಶ್ರೀರಾಮ, ಕೃಷ್ಣರೇ ಅಂದು ರಾಜಕೀಯ ಮಾಡುತ್ತಿದ್ದರು : ರಾಜನಾಥ್ ಸಿಂಗ್‌

ಲಖನೌ : ರಾಜಕೀಯ ಎಂಬುದು ಇತ್ತೀಚೆಗೆ ಪ್ರಾರಂಭವಾದದ್ದಲ್ಲ. ರಾಮ, ಕೃಷ್ಣರ ಕಾಲದಿಂದಲೂ ರಾಜಕೀಯವಿದೆ, ರಾಮರಾಜ್ಯ ಸ್ಥಾಪನೆ ಮಾಡುವ ಮೂಲಕ ಭಗವಾನ್‌ ರಾಮ ಸಹ ರಾಜಕೀಯ ಮಾಡಿದ್ದ ಎಂದು ಗೃಹ ಸಚಿವ ರಾಜನಾಥ್‌ ಸಿಂಗ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಮ ರಾಜಕೀಯದಲ್ಲಿ ನಿಷ್ಣಾತನಾಗಿದ್ದ. ಅದಕ್ಕಾಗಿಯೇ ರಾಮರಾಜ್ಯ ನಿರ್ಮಾಣ ಮಾಡಿ  ರಾಜಕೀಯ ಮಾಡಿದ್ದ ಎಂದಿದ್ದಾರೆ. ಸ್ವಾತಂತ್ರ್ಯ ಬರುವುದಕ್ಕಿಂತಲೂ ಮುನ್ನ ರಾಜಕೀಯಕ್ಕೂ ಭಾರತಕ್ಕೂ ಅವಿನಾಭಾವ ನಂಟಿತ್ತು. ಭಗವಾನ್‌ ಕೃಷ್ಣ ಸಹ ತನ್ನ ಧರ್ಮದ  ಒಳಿತಿಗಾಗಿ ರಾಜಕೀಯ ಮಾಡಿದ್ದ. ರಾಮರಾಜ್ಯ ಮಾಡುವ ಸಲುವಾಗಿ ರಾಮ ಸಹ ರಾಜಕೀಯ ಮಾಡಿದ್ದ. ರಾಮನ ಕೈಯಲ್ಲಿ ರಾಜಕೀಯವಿದ್ದಾಗ ಅದು ಭಕ್ತಿಯಾಗಿತ್ತು. ಕೃಷ್ಣನ ಕೈಯಲ್ಲಿ ರಾಜಕೀಯವಿದ್ದಾಗ ತರ್ಕ ಹಾಗೂ ತಂತ್ರಗಾರಿಕೆಯಿಂದ ಕೂಡಿತ್ತು. ಅದೇ ರಾಜಕೀಯ ಗಾಂಧೀಜಿ, ಸುಭಾಷ್ ಚಂದ್ರ ಬೋಸ್‌ ಅವರ ಕೈಯಲ್ಲಿದ್ದಾಗ ಸ್ವಾತಂತ್ರ್ಯಕ್ಕಾಗಿ ಬಳಕೆಯಾಗಿತ್ತು ಎಂದಿದ್ದಾರೆ.

ಇಂದಿನ ಯುವ ಪೀಳಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದುಕೊಳ್ಳುವ  ಅಗತ್ಯವಿದೆ ಎಂದಿರುವ ಸಿಂಗ್‌, ಯುವಕರು ರಾಜಕೀಯಕ್ಕೆ ಬರಬೇಕು. ದೇಶದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡುವಂತಾಗಬೇಕು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com