WATCH : ಧೋನಿಯ ‘ಟ್ರೇಡ್ ಮಾರ್ಕ್’ ಹೆಲಿಕಾಪ್ಟರ್ ಶಾಟ್ ಬಾರಿಸಿದ ಪೃಥ್ವಿ ಶಾ..!

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ 55 ರನ್ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಡೆಲ್ಲಿಯ ಆರಂಭಿಕ ಬ್ಯಾಟ್ಸಮನ್ ಪೃಥ್ವಿ ಷಾ 44 ಎಸೆತಗಳಲ್ಲಿ 62 ರನ್ ಗಳಿಸಿದರು. ಪೃಥ್ವಿ ಶಾ ತಮ್ಮ ಇನ್ನಿಂಗ್ಸ್ ನಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು.

ಶುಕ್ರವಾರದ ಪಂದ್ಯದಲ್ಲಿ ಪೃಥ್ವಿ ಶಾ, ಮಹೇಂದ್ರ ಸಿಂಗ್ ಧೋನಿಯ ಟ್ರೇಡ್ ಮಾರ್ಕ್ ಹೆಲಿಕಾಪ್ಟರ್ ಶಾಟ್ ಅನ್ನು ಬಾರಿಸಿ ಮಿಂಚಿದರು. ಕೆಕೆಆರ್ ಬೌಲರ್ ಮಿಚೆಲ್ ಜಾನ್ಸನ್ ಎಸೆದ ಯಾರ್ಕರ್ ಅನ್ನು ಫ್ಲಿಕ್ ಮಾಡಿದ ಪೃಥ್ವಿ, ಮಿಡ್ ವಿಕೆಟ್ ಕ್ಷೇತ್ರದಲ್ಲಿ ಬೌಂಡರಿಗಟ್ಟಿದರು. ಈ ಶಾಟ್ ಧೋನಿಯವರ ಪೇಮಸ್ ಹೆಲಿಕಾಪ್ಟರ್ ಶಾಟ್ ಅನ್ನೇ ಹೋಲುತ್ತಿತ್ತು. ಇಲ್ಲಿದೆ ವಿಡಿಯೋ..

 

Leave a Reply

Your email address will not be published.

Social Media Auto Publish Powered By : XYZScripts.com