ಸಿದ್ದರಾಮಯ್ಯ ಒಬ್ಬ ತಲೆತಿರುಕ ಸಿಎಂ, ಸೋಲಿನ ಭೀತಿಯಿಂದ ಬಾದಾಮಿಗೆ ಬಂದಿದ್ದಾರೆ : BSY

ಗದಗನಲ್ಲಿ ಸಿಎಮ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಬಿ‌ಎಸ್.ಯಡಿಯೂರಪ್ಪ ‘ ಸಿದ್ದರಾಮಯ್ಯ ಒಬ್ಬ ತಲೆತಿರುಕ ಸಿಎಮ್, ಸೋಲಿನ ಭೀತಿಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ‘ ಎಂದಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ಸಿಎಮ್ ಸಿದ್ದರಾಮಯ್ಯ ಹೇಳಿಕೆಗೆ ಬಿಎಸ್ ವೈ ತಿರುಗೇಟು ನೀಡಿದ್ದಾರೆ. ‘ ನಮ್ಮ ಬಗ್ಗೆ ಮಾತನಾಡುವ ಸಿಎಮ್ ಸುತ್ತ ಇರುವವರು ಯಾರು? ‘ ಎಂದು ಸಿಎಮ್ ಸಿದ್ದರಾಮಯ್ಯಗೆ ಬಿಎಸ್ವೈ ಪ್ರಶ್ನೆ ಹಾಕಿದ್ದಾರೆ.

‘ ಕಾಂಗ್ರೆಸ್ ನ ಪ್ರನಾಳಿಕೆ ಹಾಸ್ಯಾಸ್ಪದ. ಲೋಕಾ ನಿಷ್ಕ್ರಿಯೆಗೊಳಿಸಿದವರು ಪ್ರನಾಳಿಕೆಯಲ್ಲಿ ಲೋಕಾಯುಕ್ತವನ್ನು ಬಲ ಪಡಿಸೋ ವಿಚಾರ ಹೇಳಿದ್ದಾರೆ. ಸುಳ್ಳು ಭರವಸೆಗಳನ್ನು ರಾಹುಲ್ ಗಾಂಧಿಯಿಂದ ಹೇಳಿಸಿದ್ದಾರೆ. ಕಾಂಗ್ರೆಸ್ ಪ್ರನಾಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.

ಬದಾಮಿಯಲ್ಲಿ ನಮ್ಮ ಅಬ್ಯರ್ಥಿ ಶ್ರೀರಾಮುಲು ಗೆಲುವು ನೂರಕ್ಕೆ ನೂರು ನಿಶ್ಚಿತ. ನಿಂತ ನೆಲ ಕುಸಿತದ ಭಯದಿಂದ ಸಿಎಮ್ ಬದಾಮಿಗೆ ಬಂದಿದ್ದಾರೆ. ಮೇ.18 ಅಥವಾ 19 ರಂದು ಪಿಎಮ್ ಮೋದಿ ಸಮ್ಮುಖದಲ್ಲಿ ಲಕ್ಷಾಂತರ ಜನರ ಮದ್ಯೆ ನಾನು ಸಿಎಮ್ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.