ಸ್ತ್ರೀಯರನ್ನು ಗೌರವಿಸುತ್ತಿರುವ ಏಕೈಕ ಸರ್ಕಾರ ನಮ್ಮ ಮೋದಿ ಸರ್ಕಾರ : ಸ್ಮೃತಿ ಇರಾನಿ

ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆಯುತ್ತಿರುವ ಮಹಿಳಾ ಸಮಾವೇಶದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾಗಿಯಾಗಿದ್ದಾರೆ.

ಇದೇ ವೇಳೆ ಮಾತನಾಡಿದ ಸ್ಮೃತಿ, ರಾಣಿ ಚೆನ್ನಮ್ಮ ಸಮಾಧಿಗೆ ಭೇಟಿ ನೀಡಿರುವುದು ನನಗೆ ಖುಷಿ ತಂದಿದೆ. ಮಹಿಳೆಯರ ಅಭಿವೃದ್ಧಿ ಜೊತೆಗೆ ಅವರಿಗೆ ಉನ್ನತ ಸ್ಥಾನಮಾನ ನೀಡಿ ಗೌರವಿಸಿರುತ್ತಿರುವ ಏಕೈಕ ಸರ್ಕಾರ‌ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ಒಂದು ಕಾಲದಲ್ಲಿ ಬ್ಯಾಂಕ್ ಗೆ ಮಹಿಳೆಯರು ಹೋಗುತ್ತಿರಲಿಲ್ಲ.  ಈಗ ಬ್ಯಾಂಕ್ ಅಧಿಕಾರಿಗಳೇ ತಾಯಂದಿರ ಮನೆಗೆ ಹುಡುಕಿಕೊಂಡು ಬಂದು ಅಕೌಂಟ್ ಮಾಡಿಕೊಡುವ ಸ್ಥಿತಿಗೆ ಭಾರತವನ್ನು ತಂದು ನಿಲ್ಲಿಸಿದ್ದಾರೆ.

ಹೆಣ್ಣು ಮಕ್ಕಳಿಗೆ ಮನೆ ಲಕ್ಷ್ಮೀ ಎನ್ನುತ್ತಾರೆ. ಅಂತಹ ಲಕ್ಷ್ಮಿಗೆ ನಾವು ಅನೇಕ ಯೋಜನೆಗಳನ್ನ ಜಾರಿಗೆ ತಂದಿದ್ದೇವೆ. ಲಕ್ಷ್ಮಿ ಮನೆಗೆ ಬರುವಾಗ ಯಾವತ್ತೂ  ಕೈಹಿಡಿದು ಕೊಂಡು ಬರುವುದಿಲ್ಲ, ಬದಲಿಗೆ ಕಮಲದ‌ ಮೇಲೆ‌ ಕುಳಿತು ಬರುತ್ತಾಳೆ. ಈ ಬಾರಿ ಕಮಲಕ್ಕೆ ಮತಹಾಕಿ ವಿಶ್ವನಾಥ ಪಾಟೀಲ್ ಅವರನ್ನ ಗೆಲ್ಲಿಸಿ ಎಂದು ಮತಯಾಚನೆ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com