ಬೆಂಗಳೂರಲ್ಲಿ 42 ಮಂದಿ ಪ್ರಯಾಣಿಕರಿದ್ದ ಬಸ್‌ ಹೈಜಾಕ್‌ : ಹೀಗೆ ಮಾಡೋಕೆ ಕಾರಣವೇನು ?

ಬೆಂಗಳೂರು : ಕೇರಳಕ್ಕೆ ಹೊರಟಿದ್ದ ಖಾಸಗಿ ಬಸ್‌ವೊಂದನ್ನು 7 ಜನ ದುಷ್ಕರ್ಮಿಗಳ ತಂಡವೊಂು ಹೈಜಾಕ್‌ ಮಾಡಿದ್ದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕಲಾಸಿಪಾಳ್ಯ ಬಸ್‌ ನಿಲ್ದಾಣದಿಂದ ಲಾಮಾ ಟ್ರಾವೆಲ್ಸ್‌ನ ಬಸ್‌ವೊಂದು ಕೇರಳಕ್ಕೆ ಹೊರಟಿತ್ತು. ಈ ವೇಳೆ 2 ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಬಸ್ಸನ್ನು ಹಿಂಬಾಲಿಸಿದ್ದು, ಮೈಸೂರು ಮುಖ್ಯ ರಸ್ತೆ ಬಳಿ ಬಸ್ಸನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಬಸ್‌ನಲ್ಲಿ 42 ಮಂದಿ ಪ್ರಯಾಣಿಕರಿದ್ದು, ಬಸ್‌ನೊಳಗೆ ನುಗ್ಗಿದ ದುಷ್ಕರ್ಮಿಗಳು ತಮ್ಮನ್ನು ತಾವು ಪೊಲೀಸರು ಎಂದು ಹೇಳಿಕೊಂಡು, ಬಸ್‌ ದಾಖಲಾತಿ ಕೇಳಿದ್ದಾರೆ.
ಈ ವೇಳೆ ಬಸ್‌ ಸಿಬ್ಬಂದಿ ಹಾಗೂ ದುಷ್ಕರ್ಮಿಗಳ ಮಧ್ಯೆ ವಾಗ್ವಾದ ನಡೆದಿದ್ದು, ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ. ಅಲ್ಲದೆ ಬಸ್‌ ಚಾಲಕನನ್ನು ದುಷ್ಕರ್ಮಿಯೊಬ್ಬ ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ತೆರಳಿದ್ದಾನೆ. ಮತ್ತೊಬ್ಬ ದುಷ್ಕರ್ಮಿ ತಾನೇ ಬಸ್‌ ಚಲಾಯಿಸಿಕೊಂಡು ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಗೋಡೌನ್‌ ಗೆ ಹೋಗಿದ್ದಾನೆ.
ಬಳಿಕ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದು, ಯಾರೂ ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಬೇಡಿ. ಹಾಗೇನಾದರು ಮಾಡಿದರೆ ಜೀವ ತೆಗೆಯುವುದಾಗಿ ಬೆದರಿಸಿದ್ದಾನೆ. ಈ ವೇಳೆ ದುಷ್ಕರ್ಮಿಗಳ ಕಣ್ತಪ್ಪಿಸಿ ಪ್ರಯಾಣಿಕನೊಬ್ಬ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ವಿಚಾರ ತಿಳಿದ ಕೂಡಲೆ 30 ಮಂದಿ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಬಸ್ಸನ್ನು ಸುತ್ತುವರಿದಿದ್ದಾರೆ.
ಕೂಡಲೆ ದುಷ್ಕರ್ಮಿಗಳು ಪರಾರಿಯಾಗಿದ್ದು, ಮೂವರನ್ನು ಬಂಧಿಸಿುವುದಾಗಿ ತಿಳಿದುಬಂದಿದೆ.
ಈ ಕುರಿತು ಪೊಲೀಸ್‌ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್‌ ಪ್ರತಿಕ್ರಿಯಿಸಿದ್ದು, ಲಾಮಾ ಸಂಸ್ಥೆಯ ಮಾಲೀಕ ನೌಷಾದ್‌, ಸುಲ್ತಾನ್‌  ಫೈನಾನ್ಸ್‌ ಕಂಪನಿಯಿಂದ ಬಸ್‌ ಖರೀದಿಗಾಗಿ ಸಾಲ ಪಡೆದಿದ್ದರು. ಆದರೆ ತಿಂಗಳಿಗೆ ಸರಿಯಾಗಿ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಸ್ಸನ್ನೇ ಅಪಹರಿಸಿರುವುದಾಗಿ ಹೇಳಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 thoughts on “ಬೆಂಗಳೂರಲ್ಲಿ 42 ಮಂದಿ ಪ್ರಯಾಣಿಕರಿದ್ದ ಬಸ್‌ ಹೈಜಾಕ್‌ : ಹೀಗೆ ಮಾಡೋಕೆ ಕಾರಣವೇನು ?

Leave a Reply

Your email address will not be published.

Social Media Auto Publish Powered By : XYZScripts.com