ಅಂತೂ ಹುಚ್ಚ ವೆಂಕಟ್‌ಗೆ “ಯಕ್ಕಡ” ಕೊಟ್ಟು ಕಳಿಸಿದ ಚುನಾವಣಾ ಆಯೋಗ !

ಬೆಂಗಳೂರು : ನನ್ನ ಮಗಂದ್‌ ನನ್ ಎಕ್ಕಡ ಇದು ಹುಚ್ಚ ವೆಂಕಟ್‌ ಅವರ ಫೇಮಸ್‌ ಡೈಲಾಗ್. ಈಗ ಫೈರಿಂಗ್‌ ಸ್ಟಾರ್‌ ಹುಚ್ಚ ವೆಂಕಟ್‌ ಚುನಾವಣೆಗೆ ನಿಂತಿರುವುದು ಗೊತ್ತಿರುವ ವಿಷಯವೇ. ಇದಕ್ಕಾಗಿ ಚುನಾವಣಾ ಆಯೋಗ ಅವರ ಫೇವರಿಟ್‌ ಯಕ್ಕಡ ಚಿಹ್ನೆಯನ್ನೇ ದಯಪಾಲಿಸಿದೆ.

ಹುಚ್ಚ ವೆಂಕಟ್‌ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಆಯೋಗ ಅಭ್ಯರ್ಥಿಗಳ ಗುರುತಿನ ಚಿಹ್ನೆಯನ್ನು ಬಿಡುಗಡೆ ಮಾಡಿದ್ದು, ಹುಚ್ಚ ವೆಂಕಟ್‌ಗೆ ಚಪ್ಪಲಿ ಚಿಹ್ನೆಯ ಗುರುತೇ ಸಿಕ್ಕಿದೆ.

ಯಕ್ಕಡದೊಂದಿಗೆ ಚುನಾವಣಾ ಅಖಾಡಕ್ಕಿಳಿದಿರುವ ಹುಚ್ಚ ವೆಂಕಟ್‌ ಅದೃಷ್ಟ ಮೇ 15ರಂದು ಗೊತ್ತಾಗಲಿದೆ.

 

Leave a Reply

Your email address will not be published.