ಜನಾರ್ಧನ ರೆಡ್ಡಿ ನೀನೊಬ್ಬ ಗೂಂಡಾ, ನಿನ್ನ ಮಾತಿನ ಮೇಲೆ ನಿಗಾ ಇರಲಿ…..!

ಬಳ್ಳಾರಿ : ಸಿಎಂ ಸಿದ್ದರಾಮಯ್ಯರನ್ನು ಸಿದ್ದರಾವಣ ಎಂಬ ಪದ ಬಳಕೆ ವಿಚಾರ ಸಂಬಂಧ ಬಳ್ಳಾರಿ ಜಿಲ್ಲಾ ದೇವರಾಜು ಅರಸು ವೇದಿಕೆಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಜನಾರ್ಧನರೆಡ್ಡಿ ಸಿಎಂ ಬಗ್ಗೆ ಅಸಂಬದ್ಧ ಪದ ಬಳಕೆಗೆ ಆಕ್ರೋಶ ವ್ಯಕ್ತವಾಗಿದ್ದು, ಇದು ಕರ್ನಾಟಕ. ಆಂಧ್ರ ಶೈಲಿ ರಾಜಕಾರಣ ಇಲ್ಲಿ ನಡೆಯೋಲ್ಲ. ಮಾತಿನ ಮೇಲೆ ನಿಗಾವಹಿಸಿ ಜನಾರ್ಧನರೆಡ್ಡಿ ಮಾತನಾಡಲಿ. ಪದ ಬಳಕೆ ಮಾಡುವಾಗ ಜವಾಬ್ದಾರಿಯುತ ಪದ ಬಳಕೆ ಮಾಡಲಿ. ಜನಾರ್ಧನರೆಡ್ಡಿ ಗೂಂಡಾ, ಬಲವಂತದ ರಾಜಕಾರಣ ಮಾಡುತ್ತಿದ್ದಾರೆ. ಕರ್ನಾಟಕ ಶಾಂತಿಯ ನೆಲ, ನಿಮ್ಮ ರಾಜಕಾರಣ , ಸಂಸ್ಕೃತಿಗಳ ಬಗ್ಗೆ ಗೌರವ ಇರಲಿ. ಒಂದು ವೇಳೆ ಬದಲಾವಣೆ ಮಾಡಿಕೊಳ್ಳದೇ ಇದ್ದರೆ ನ್ಯಾಯಾಲಯದ ಮೋರೆ ಹೋಗಬೇಕಾಗುತ್ತದೆ ಎಂದು ಕೆಪಿಸಿಸಿ ಸದಸ್ಯ ಹಾಗೂ ದೇವರಾಜ್ ಅರಸು ವೇದಿಕೆಯ ಜಿಲ್ಲಾ ಅಧ್ಯಕ್ಷ ಕಲ್ಲುಕಂಬ ಪಂಪಾಪತಿ ಎಚ್ಚರಿಸಿದ್ದಾರೆ.

 

Leave a Reply

Your email address will not be published.