ಅದ್ಹೇಗೆ ಗೆಲ್ತೀಯೋ ನಾವೂ ನೋಡ್ತೀವಿ : BJP ಅಭ್ಯರ್ಥಿಗೆ ವಿಜಯೇಂದ್ರ ಬೆಂಬಲಿಗನಿಂದ ಧಮ್ಕಿ

ಮೈಸೂರು :  ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆ ಘಳಿಗೆಯಲ್ಲಿ ವರುಣಾ ಕ್ಷೇತ್ರದಿಂದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಬೆಂಬಲಿಗರ ಆಕ್ರೋಶ ಮಿತಿ ಮೀರಿದೆ. ವಿಜಯೇಂದ್ರ ಬದಲಿಗೆ ಬಸವರಾಜು ಎಂಬುವವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಕಾರ್ಯಕರ್ತ ರಘು ಎಂಬುವವರು ಬಸವರಾಜು ಅವರಿಗೆ ಧಮ್ಕಿ ಹಾಕಿದ್ದಾರೆ.

ಎಲ್ಲರಿಗೂ ಟಿಕೆಟ್‌ ಬೇಡ ಅಂದರೆ ನೀವು ಮಾತ್ರ ಹೇಗೆ ತಗೊಂಡ್ರಿ, ನೀವೂ ತಗೊಂಡಿಲ್ಲ ಎಂದಿದ್ದರೆ ವಿಜಯೇಂದ್ರ ಸುಲಭವಾಗಿ ಗೆಲ್ಲುತ್ತಿದ್ದರು. ನಿಮ್ಮನ್ನು ಸೋಲಿಸಲು ನಾವೆಲ್ಲಾ ಸಿದ್ಧರಾಗಿದ್ದೇವೆ. ನೀವು ಅದ್ಹೇಗೆ ಗೆಲ್ಲುತ್ತೀರಿ ಎಂಬುದನ್ನು ನಾನೂ ನೋಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಟಿಕೆಟ್ ತಗೊಂಡಿರೋ ನಿಮಗೆ ಸರಿಯಾದ ಪಾಠ ಕಲಿಸ್ತೀವಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com