ನಾಯಕ ಇಲ್ಲ, ನಾಯಕಿಯೂ ಇಲ್ಲ, ಆದ್ರೂ ಶುರುವಾಗಿದೆ ಕೋಟಿಗೊಬ್ಬ-3 ಚಿತ್ರೀಕರಣ !
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಕೋಟಿಗೊಬ್ಬ -3 ಸಿನಿಮಾ ಸೆಟ್ಟೇರಿದ್ದು, ಈ ಸಿನಿಮಾದ ಚಿತ್ರೀಕರಣ ಕಳೆದ ಬುಧವಾರದಿಂದ ಪ್ರಾರಂಭವಾಗಿದೆ. ಆದರೆ ಈ ಸಿನಿಮಾದ ವಿಶೇಷವೆಂದರೆ ನಾಯಕ ಹಾಗೂ ನಾಯಕಿ ಇಲ್ಲದೆ ಶೂಟಿಂಗ್ ಪ್ರಾರಂಭವಾಗಿದೆ.
ಕೋಟಿಗೊಬ್ಬ-2 ಸಿನಿಮಾದ ಯಶಸ್ಸಿನ ಬಳಿಕ ಸುದೀಪ್ ಹಾಗೂ ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಷನ್ನಲ್ಲಿ ಬರುತ್ತಿರುವ ಕೋಟಿಗೊಬ್ಬ-3 ಸಿನಿಮಾಗೆ ಶಿವ ಕಾರ್ತಿಕ್ ನಿರ್ದೇಶನವಿದೆ. ಮೇ 2ರಂದು ಸಿನಿಮಾದ ಮಹೂರ್ತ ನೆರವೇರಲಿದೆ. ಸದ್ಯಕ್ಕೆ ಸಿನಿಮಾದ ಚಿಕ್ಕ ಪುಟ್ಟ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.
ಆದರೆ ಸಿನಿಮಾದ ನಾಯಕ ಸುದೀಪ್ ಇನ್ನೂ ಸೆಟ್ಗೆ ಎಂಟ್ರಿ ಕೊಟ್ಟಿಲ್ಲ. ಅವರ ಸೀನ್ನ ಹೊರತಾಗಿ ಬೇರೆ ದೃಶ್ಯಗಳನ್ನು ಶೂಟ್ ಮಾಡಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ಶೂಟಿಂಗ್ ಮುಗಿಸುವ ಹಿನ್ನೆಲೆಯಲ್ಲಿ ಬೇಗ ಚಿತ್ರೀಕರಣ ಪ್ರಾರಂಭಿಸಲಾಗಿದೆ. ಅಲ್ಲದೆ ಈ ಸಿನಿಮಾಗೆ ಇನ್ನೂ ನಾಯಕಿಯ ಆಯ್ಕೆ ಸಹ ನಡೆದಿಲ್ವಂತೆ.
ಈ ಸಿನಿಮಾಗೆ ಸುದೀಪ್ ಅವರೇ ಕಥೆ ಬರೆದಿದ್ದಾರಂತೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ.