ಸಿಎಂ ಸಿದ್ದರಾಮಯ್ಯ ಬಾದಾಮಿ ಆಯ್ಕೆ ಮಾಡಿದ್ದು ಖಂಡಿತ ಸರಿಯಲ್ಲ..! : ಹೀಗಂದಿದ್ಯಾರು ?

ರಾಯಚೂರು : ಕಾಂಗ್ರೆಸ್ ಸರ್ಕಾರ ವೀರಶೈವ ಹಾಗೂ ಲಿಂಗಾಯತ ಧರ್ಮವನ್ನು ಒಡೆದಿದ್ದು, ವೀರಶೈವರ ಪ್ರಮುಖ ಸ್ಥಳವಾಗಿರುವ ಶಿವಯೋಗ ಮಂದಿರ ಬಾದಾಮಿ ಕ್ಷೇತ್ರದಲ್ಲಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಪ್ರಚಾರ ಮಾಡಿದ್ದರೆ ಗೆಲ್ಲುತ್ತಿದ್ದರು, ಆದರೆ ಅವರು ಬಾದಾಮಿಯಲ್ಲಿ ಸ್ಪರ್ಧಿಸಿರುವುದು ಸರಿ ಅಲ್ಲ ಎಂದು ರಾಯಚೂರಿನಲ್ಲಿ ಚಿಕ್ಕಸುಗೂರು ಚೌಕಿಮಠದ ಡಾ.ಸಿದ್ದಲಿಂಗ ಸ್ವಾಮೀಜಿಗಳು ಅಭಿಪ್ರಾಯ ಪಟ್ಟರು.

ನಗರದ ಪತ್ರಿಕಾ ಭವನದಲ್ಲಿ ಮಾತಾಡಿದ ಸ್ವಾಮೀಜಿ, ಬಾದಾಮಿಯಲ್ಲಿ‌ ಕುರುಬ ಮತಗಳು ಅಧಿಕವಾಗಿದೆ ಎಂಬ ಕಾರಣಕ್ಕೆ ಬಾದಾಮಿಗೆ ಬಂದಿದ್ದಾರೆ. ಆದರೆ ಪಂಚಮಸಾಲಿ ಹಾಗೂ ಗಾಣಿಗ ಮತಗಳು ಅಧಿಕವಾಗಿದ್ದು ಧರ್ಮ ಒಡೆದಿದ್ದರಿಂದ ಅದರ ಎಫೆಕ್ಟ ಆಗಲಿದೆ. ಕಾಂಗ್ರೆಸ್ ಧರ್ಮ ಒಡೆದಿರುವದರಿಂದ ಗ್ರಾಮೀಣ ಜನರು ಮುಂದೆ ಇನ್ನಷ್ಟು ಧರ್ಮ ಒಡೆಯುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಸ್ವಾಮೀಜಿಗಳು ರಾಜಕೀಯಕ್ಕೆ ಬರಬಾರದು, ಉಡುಪಿಯ ಶಿರೂರುಮಠದ ಸ್ವಾಮೀಜಿಗಳು ಸ್ಪರ್ಧಿಸಿರುವುದು ಸರಿ ಅಲ್ಲ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com