ವಿಜಯೇಂದ್ರನನ್ನು ಮರಿಹುಲಿಯಂತೆ ನೋಡ್ಕೊಂಡಿದ್ವಿ,ನೀವೇ ಇಲಿ ಮಾಡ್ಬಿಟ್ರಿ ಎಂದ ಕಾರ್ಯಕರ್ತರು

ಮೈಸೂರು : ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರಗೆ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ವಿಜಯಂದ್ರ ಬೆಂಬಲಿಗರ ಆಕ್ರೋಶ ಎಲ್ಲೆ ಮೀರಿದೆ. ಮಗನಿಗೆ ಟಿಕೆಟ್ ಕೊಡದಿದ್ದಕ್ಕೆ ಯಡಿಯೂರಪ್ಪ ವಿರುದ್ಧ ವಿಜಯೇಂದ್ರ ಅಭಿಮಾನಿಗಳು ಹರಿಹಾಯ್ದಿದ್ದು, ಮಗನಿಗೆ ಟಿಕೆಟ್ ಕೊಡಿಸಲಾಗದವನು ನೀನ್ಯಾವ ಮುಖ್ಯಮಂತ್ರಿ ಆಗುತ್ತೀಯ ಎಂದು ನಿಂದಿಸಿದ್ದಾರೆ.

ಟಿಕೆಟ್ ಕೈ ತಪ್ಪಿಸಿದ್ದಕ್ಕಾಗಿ ಸಚಿವ ಅನಂತ್ ಕುಮಾರ್ ಹಾಗೂ ಸದಾನಂದಗೌಡ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಬಿಜೆಪಿ ಹಿರಿಯ ನಾಯಕರಿಗೆ ಚಪ್ಪಲಿ ತೋರಿಸಿ ವೀಡಿಯೋ ರೆಕಾರ್ಡ್  ಮಾಡಿದ್ದಾರೆ. ಅಲ್ಲದೇ ವಿಜಯೇಂದ್ರನನ್ನು ಮರಿ ಹುಲಿಯ ರೀತಿ ನೋಡಿಕೊಂಡಿದ್ದೆವು. ಆದರೆ ಅವರ ಪಕ್ಷದವರೇ ಈಗ ಇಲಿ ಮಾಡಿಬಿಟ್ಟರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com