ಇನ್ಮುಂದೆ ಮನೆಗಳಲ್ಲಿ ಪ್ರಧಾನಿ ಮೋದಿ ಫೋಟೋ ಹಾಕುವುದು ಕಡ್ಡಾಯ…….!!

ಭೋಪಾಲ್‌ : ಮಧ್ಯ ಪ್ರದೇಶದಲ್ಲಿ ಸರ್ಕಾರ ನಿರ್ಮಿಸುವ ಮನೆಗಳ ಟೈಲ್ಸ್‌ಗಳಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಕಡ್ಡಾಯವಾಗಿ ಬಳಸಬೇಕಂತೆ. ಹೀಗಂತ ಮದ್ಯಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಕೇವಲ ಪ್ರಧಾನಿ ಮೋದಿ ಮಾತ್ರವಲ್ಲ ಶಿವರಾಜ್‌ ಸಿಂಗ್‌ ಚೌಹಾಣ್ ಅವರ ಫೋಟೋ ಬಳಕೆಯೂ ಕಡ್ಡಾಯವಾಗಿದೆ.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಾಣವಾಗುವ ಮನೆಗಳಿಗೆ ಟೈಲ್ಸ್ ಹಾಕಲಾಗುತ್ತದೆ. ಆ ಟೈಲ್ಸ್‌ಗಳ ಮೇಲೆ ಮೋದಿ ಹಾಗೂ ಶಿವರಾಜ್‌ ಸಿಂಗ್‌ ಚೌಹಾಣ್ ಫೋಟೋವನ್ನು ಕಡ್ಡಾಯವಾಗಿ ಹಾಕುವಂತೆ ನಗರಾಡಳಿತ ಮತ್ತು ಅಭಿವೃದ್ಧಿ ಇಲಾಖೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ಆದೇಶದ ಅನುಸಾರ ಮನೆಯ ಮುಖ್ಯದ್ವಾರ ಹಾಗೂ ಅಡುಗೆ ಮನೆಯಲ್ಲಿ ಈ ಟೈಲ್ಸ್‌ಗಳನ್ನು ಹಾಕುವಂತೆ ಸೂಚಿಸಲಾಗಿದೆ.

ಮನೆಗೆ ಬಳಕೆ ಮಾಡುವ ಟೈಲ್ಸ್ ಯಾವ ರೀತಿ ಇರಬೇಕು ಎಂಬುದರ ಬಗ್ಗೆಯೂ ಆದೇಶದಲ್ಲಿ ತಿಳಿಸಲಾಗಿದ್ದು, 450*600 mm ಅಳತೆಯಲ್ಲಿರಬೇಕು. ಅಲ್ಲದೆ ಟೈಲ್ಸ್ ಮೇಲೆ ಸಬ್‌ಕಾ ಸಪ್ನಾ, ಘರ್‌ ಹೋ ಅಪ್ನಾ ಎಂಬ ಘೋಷವಾಕ್ಯವನ್ನು ಬರೆದಿದ್ದು, ಟೈಲ್ಸ್‌ ಮಧ್ಯದಲ್ಲಿ ಪ್ರಧಾನಮಂತ್ರಿ ಯೋಜನಾ-ಅರ್ಬನ್‌ ಎಂದು ಬರೆಯಲಾಗಿದೆ, ಅಲ್ಲದೆ ಟೈಲ್ಸ್‌ನ ಎಡಭಾಗದಲ್ಲಿ ಮೋದಿ ಫೋಟೋ ಹಾಗೂ ಬಲಭಾಗದಲ್ಲಿ ಶಿವರಾಜ್‌ ಸಿಂಗ್ ಚೌಹಾಣ್ ಫೋಟೋವಿದ್ದು, ಸರ್ಕಾರದ ಲೋಗೋ ಹಾಗೂ ಆರ್‌ಎಸ್‌ಎಸ್ ಸಂಸ್ಥಾಪಕ ದೀನ್‌ ದಯಾಳ್‌ ಉಪಾಧ್ಯಾಯ ಅವರ ಫೋಟೋ ಸಹ ಟೈಲ್ಸ್‌ನಲ್ಲಿದೆ.

ಮದ್ಯಪ್ರದೇಶ ಸರ್ಕಾರದ ಈ ಯೋಜನೆಗೆ ವಿಪಕ್ಷಗಳು ಕಿಡಿಕಾರಿದ್ದು, ಈ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿವೆ.

One thought on “ಇನ್ಮುಂದೆ ಮನೆಗಳಲ್ಲಿ ಪ್ರಧಾನಿ ಮೋದಿ ಫೋಟೋ ಹಾಕುವುದು ಕಡ್ಡಾಯ…….!!

  • April 27, 2018 at 4:58 PM
    Permalink

    Курсова.docx. — 121.57 кб. Інституційними установами ринку є спеціальні кредитні заклади і фондові біржі. Значення ипотечное кредитование стажер ринку полягає в тому, що він відкриває широкі можливості для фінансування інвест.. Подборка готовые кухни киев недорого цены фото не оставит у вас никаких вопросов. А другие материалы и фото закроют остальные выпросы по интерьеру, ремонту, дизайну и строительству.. 63jmxg598d

    Reply

Leave a Reply

Your email address will not be published.

Social Media Auto Publish Powered By : XYZScripts.com