ಕಥುವಾ ಅತ್ಯಾಚಾರ ಪ್ರಕರಣಕ್ಕೂ ನನ್ನ ಕೇಸ್ಗೂ ಸಾಮ್ಯತೆ ಇದೆ ಎಂದ್ರು ಕ್ರಿಕೆಟರ್ ಶಮಿ ಪತ್ನಿ !
ಕೋಲ್ಕತ್ತಾ : ಕಥುವಾ ಅತ್ಯಾಚಾರ ಪ್ರಕರಣಕ್ಕೂ ನನ್ನ ಪ್ರಕರಣಕ್ಕೂ ಹೋಲಿಕೆ ಇದೆ ಎಂದು ಟೀಂ ಇಂಡಿಯಾದ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಶಮಿ ಪ್ರಕರಣ ಸಂಬಂಧ ದೇಶದಲ್ಲಿ ವ್ಯಾಪಕ ಚರ್ಚೆ ಉಂಟುಮಾಡಿದ್ದು, ಶಮಿ ವಿರುದ್ದ ಪತ್ನಿ ಹಸೀನ್ ಅತ್ಯಾಚಾರ, ಕೊಲೆ ಯತ್ನ ಪ್ರಕರಣಗಳನ್ನು ದಾಖಲಿಸಿದ್ದರು. ಈಗ ತಮ್ಮ ಕೇಸನ್ನು ಕಥುವಾ ಪ್ರಕರಣಕ್ಕೆ ಹೋಲಿಸಿಕೊಂಡಿದ್ದಾರೆ.

ಕಥುವಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಏಪ್ರಿಲ್ 23ರಂದು ಕೊಲ್ಕತ್ತಾದಲ್ಲಿ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ್ದ ಹಸೀನ್, ನನಗೂ ಕಉವಾ ಪ್ರಕರಣಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಪ್ರಕರಣಗಳು ಒಂದೇ ರೀತಿ ಇದೆ. ಆದರೆ ಒಂದೇ ಒಂದು ವ್ಯತ್ಯಾಸವೆಂದರೆ ಅಲ್ಲಿ ಆಸಿಫಾ ಸತ್ತಿದ್ದಾಳೆ ನಾನಿನ್ನೂ ಬದುಕಿದ್ದೇನೆ ಅಷ್ಟೇ ಎಂದಿದ್ದಾರೆ.
ಅಲ್ಲದೆ ಶಮಿ ಹಾಗೂ ಕುಟುಂಬಸ್ಥರು ನನ್ನ ಮೇಲೆ ಅತ್ಯಾಚಾರವೆಸಗಿ, ನನ್ನನ್ನು ಕೊಂದು ಕಾಡಿನಲ್ಲಿ ಶವ ಎಸೆಯುವ ಯೋಜನೆ ರೂಪಿಸಿದ್ದರು. ಇದೆಲ್ಲಾ ನಡೆದ ಎರಡು ತಿಂಗಳಾಗಿದ್ದು, ಅದರ ವಿರುದ್ಧ ನಾನಿನ್ನೂ ಹೋರಾಟ ಮಾಡುತ್ತಲೇ ಇದ್ದೇನೆ ಎಂದಿದ್ದಾರೆ.