ಮೋದಿ ಉಳಿಯಬೇಕು, ಇಲ್ಲವೇ ಸಂವಿಧಾನ ಉಳಿಯಬೇಕು : ಜಿಗ್ನೇಶ್ ಮೇವಾನಿ

ಕಲಬುರ್ಗಿ : ಪ್ರಧಾನಿ ಮೋದಿ ನಿಮ್ಮ ರಾಜ್ಯಕ್ಕೆ ಬಂದರೆ ತುಟಿ ಬಿಚ್ಚಿ ಮಾತನಾಡುವಂತೆ ಕೇಳಿ. ನಿಮ್ಮ ಸಮಸ್ಯೆಗಳ ಬಗ್ಗೆ ಬಾಯಿ ಬಿಡುವಂತೆ ಒತ್ತಾಯಿಸಿ ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೂ ಮೋದಿ ಉಳಿಯಬೇಕು, ಇಲ್ಲವೇ ಸಂವಿಧಾನ ಉಳಿಯಬೇಕು. ನಾವು ನಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಮೋದಿ ರಾಜ್ಯಕ್ಕೆ ಬಂದರೆ ಗೋಬ್ಯಾಕ್ ಎಂದು ಹೇಳಿ. ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಯಾವುದೇ ಬಿಜೆಪಿ ನಾಯಕರಿಗೆ ಅವಕಾಶ ಕೊಡಬೇಡಿ ಎಂದಿದ್ದಾರೆ.

ಮೋದಿ ಯಾವುದೇ ರಾಜ್ಯಕ್ಕೆ ಕಾಲಿಟ್ಟರೂ ನಾವು ಮುತ್ತಿಗೆ ಹಾಕುತ್ತೇವೆ. ಮಂಗಳಗ್ರಹಕ್ಕೆ ಹೋದರೂ ಬಿಡುವುದಿಲ್ಲ. ಮಾತನಾಡಲು, ರಾಜಕೀಯ ಮಾಡಲು ಯಾವುದೂ ವಿಷಯ ಇಲ್ಲ ಎಂದಾಗ ರಾಮನ ವಿಚಾ ತೆಗೆಯುತ್ತಾರೆ. ಕಮಲ ಹೇಗೆ ಕೆಸರಿನಲ್ಲಿರುತ್ತದೋ ಹಾಗೇ ಇವರುಗಳೂ ಎಂದಿದ್ದಾರೆ.

ಶ್ರೀಶ್ರೀ ರವಿಶಂಕರ್‌ ಯಮುನಾ ನದಿಯಲ್ಲಿ ಕೊಳಕು ಮಾಡಿ ಹಾಕಿದರು. ಅವರಿಗೆ ಎಷ್ಟು ದಂಡ ವಿಧಿಸಿದ್ದೀರಿ ಹೇಳಿ ಮೋದೀಜಿ ಎಂದಿರುವ ಮೇವಾನಿ, ನೋಟ್‌ ಬ್ಯಾನ್‌ ಆದಾಗ ತನ್ನ ತಾಯಿಯನ್ನೇ ಮೋದಿ ಕ್ಯೂನಲ್ಲಿ ನಿಲ್ಲುವಂತೆ ಮಾಡಿದರು. ಮೋದಿ ಕಾರ್ಯಕ್ರಮದಲ್ಲಿ ಕುರ್ಚಿ ಎಸೆಯಿರಿ ಎಂದ ನನ್ನ ಮೇಲೆ ಎಫ್‌ಐಆರ್‌ ಹಾಕಿದ್ದಿರಿ, ಹಾಗಾದರೆ 15 ಲಕ್ಷ ಕೊಡ್ತೀನಿ ಎಂದು ಮೋಸ ಮಾಡಿದ ಅವರ ವಿರುದ್ದವೂ ಎಫ್‌ಐಆರ್‌ ಹಾಕಬೇಕಲ್ಲವೇ ಎಂದಿದ್ದಾರೆ.

Leave a Reply

Your email address will not be published.