ರಾಹುಲ್‌ ಗಾಂಧಿ ವಿಶೇಷ ವಿಮಾನದ ಪೈಲೆಟ್‌ ವಿರುದ್ಧ ದೂರು ದಾಖಲಿಸಿದ ಕೈ ನಾಯಕ !

ಹುಬ್ಬಳ್ಳಿ : ರಾಹುಲ್‌ ಗಾಂಧಿ ಅವರ ವಿಶೇಷ ವಿಮಾನದ ಇಬ್ಬರು ಪೈಲೆಟ್‌ಗಳ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕಿರ್‌ ಸನದಿ  ದೂರು ನೀಡಿದ್ದಾರೆ.

ರಾಹುಲ್ ಗಾಂಧಿ ವಿಶೇಷ ವಿಮಾನ ಪೈಲಟ್ ನಿಂದ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ.  ನಿನ್ನೆ ರಾಹುಲ್‌ ಗಾಂಧಿ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ್ದರು. ಈ ವೇಳೆ ನಿಗದಿತ ಎತ್ತರಕ್ಕಿಂತ ವಿಮಾನವನ್ನು ಮೇಲೆ ಹಾರಿಸಲಾಗಿದ್ದು, ವಿಮಾನ ರಡಾರ್‌ನಿಂದ 3 ನಿಮಿಷ 37 ಸೆಕೆಂಡ್‌ ಸಂಪರ್ಕ ಕಳೆದುಕೊಂಡಿತ್ತು.

ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ  Aircraft ಕಾಯ್ದೆ D u/s 287,336 IPC r/w s.11 of Aircraft Act 1934 ಅಡಿ ಇಬ್ಬರು ಪೈಲಟ್ ಗಳ ವಿರುದ್ಧ ಗೋಕುಲ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com