JDS ನಿಂದ ಮಗನಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ : ಆಘಾತದಿಂದ ಶಾಸಕರ ತಂದೆ ವಿಧಿವಶ

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ಶಾಸಕ ರಾಜಣ್ಣ ಗೆ ಜೆಡಿಎಸ್‌ನಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ರಾಜಣ್ಣ ಅವರ ತಂದೆಗೆ ಆಘಾತವಾಗಿ ಸಾವಿಗೀಡಾಗಿರುವುದಾಗಿ ತಿಳಿದುಬಂದಿದೆ.


ಮೃತರನ್ನು ರಾಜಣ್ಣ ತಂದೆ ಎಂಪಿ ಮುನಿಯಪ್ಪ (79) ಎಂದು ತಿಳಿದುಬಂದಿದೆ.  ರಾಜಣ್ಣ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಶಾಸಕರಾಗಿದ್ದು, ಮತ್ತೆ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಬಯಸಿ ಎರಡು ಬಾರಿ ನಾಮಪತ್ರ ಸಲ್ಲಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ರಾಜಣ್ಣ ಬದಲು ರವಿಕುಮಾರ್ ಗೆ ಟಿಕೆಟ್ ನೀಡಲಾಗಿತ್ತು.
ಕಳೆದ ಎರಡು ಮೂರು ದಿನಗಳಿಂದ ರಾಜಣ್ಣ ತಂದೆ ಯಾರ ಜೊತೆ ಮಾತನಾಡುತ್ತಿರಲಿಲ್ಲ ಎಂದು ತಿಳಿದುಬಂದಿದ್ದು, ಇಂದು ಸಾವಿಗೀಡಾಗಿದ್ದಾರೆ. ರಾಜಣ್ಣ ಅವರ ಮನೆಯಲ್ಲಿ ಶೋಕ ಮಡುಗಟ್ಟಿದೆ.

Leave a Reply

Your email address will not be published.