ಸ್ನೇಹಿತ ಶ್ರೀರಾಮುಲುಗಾಗಿ ರಾಜಕೀಯಕ್ಕೆ ರೀ ಎಂಟ್ರಿ ಕೊಟ್ಟಿದ್ದ ರೆಡ್ಡಿಗೆ ಹೈಕಮಾಂಡ್‌ನಿಂದ ಬ್ರೇಕ್‌ ?

ಬೆಂಗಳೂರು : ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಗೆಲುವಿಗಾಗಿ ಪ್ಲಾನ್‌ ಮಾಡುತ್ತಿರುವ ಜನಾರ್ಧನ ರೆಡ್ಡಿ ವೇಗಕ್ಕೆ ಹೈಕಮಾಂಡ್‌ ಬ್ರೇಕ್‌ ಹಾಕಿದೆ.

ಜನಾರ್ಧನ ರೆಡ್ಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಕುರಿತು ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ರೆಡ್ಡಿಯವರನ್ನು ದೂರವಿಡಲು ಬಿಜೆಪಿ ಚಿಂತಿಸಿದ್ದು, ಶ್ರೀರಾಮುಲು ಜೊತೆ ಬಹಿರಂಗ ಸಭೆಯಲ್ಲಿ ಭಾಗವಹಿಸುವುದಕ್ಕೆ ಕಡಿವಾಣ ಹಾಕಿದೆ.

ಆದರೆ ಈ ಕುರಿತು ಜನಾರ್ಧನ ರೆಡ್ಡಿ ಹೇಳಿಕೆ ನೀಡಿದ್ದು, ಪಕ್ಷದ ಸೂಚನೆಯನ್ನು ನಾನು ಅಗತ್ಯವಾಗಿ ಪಾಲಿಸುತ್ತೇನೆ. ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿರುವುದಾಗಿ ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.

ಹೈಕಮಾಂಡ್‌ ಬಿಜೆಪಿ ನಾಯಕರಿಗೆ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದು, ಬಾಹ್ಯ ಪ್ರಚಾರಕ್ಕಿಂತ ಆಂತರಿಕ ಪ್ರಚಾರಕ್ಕೆ ಒತ್ತು ನೀಡುವಂತೆ ಆದೇಶಿಸಿದೆ. ಪ್ರಚಾರದ ವೇಳೆ ವಿವಾದಿತ ಅಭಿಪ್ರಾಯಗಳನ್ನು ಹೇರದಂತೆ, ಜಾತಿ, ವ್ಯಕ್ತಿಯಾಧಾರಿತವಾಗಿ ಅವಹೇಳನ ಮಮಾಡದಂತೆ ಖಡಕ್‌ ಸೂಚನೆ ರವಾನಿಸಿದೆಯಂತೆ.

 

2 thoughts on “ಸ್ನೇಹಿತ ಶ್ರೀರಾಮುಲುಗಾಗಿ ರಾಜಕೀಯಕ್ಕೆ ರೀ ಎಂಟ್ರಿ ಕೊಟ್ಟಿದ್ದ ರೆಡ್ಡಿಗೆ ಹೈಕಮಾಂಡ್‌ನಿಂದ ಬ್ರೇಕ್‌ ?

Leave a Reply

Your email address will not be published.