ನಿಜವಾದ ಭಾರತೀಯ ನಾರಿ ಅಂದ್ರೆ ಐಶ್ವರ್ಯಾ ರೈ, ಡಯಾನಾ ಹೆಡನ್‌ ಅಲ್ಲ : ತ್ರಿಪುರಾ ಸಿಎಂ

ಅಗರ್ತಲಾ : ಇತ್ತೀಚೆಗಷ್ಟೇ ಮಹಾಭಾರತ ಕಾಲದಲ್ಲೇ ಇಂಟರ್‌ನೆಟ್ ಇತ್ತು ಎಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದ ತ್ರಿಪುರಾ ಸಿಎಂ ಬಿಪ್ಲಬ್‌ ದೇಬ್‌ ಮತ್ತೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಅಗರ್ತಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐಶ್ವರ್ಯಾ ರೈ ನಿಜವಾದ ಭಾರತೀಯ ನಾರಿ, ಆದರೆ ಮಾಜಿ ವಿಶ್ವಸುಂದರಿ ಡಯಾನಾ ಹೆಡನ್‌ ಅಲ್ಲ. ಭಾರತೀಯ ನಾರಿ ಲಕ್ಷ್ಮಿ, ಸರಸ್ವತಿಯ ರನ್ನು ಪ್ರತಿನಿಧಿಸುತ್ತಾರೆ. ಐಶ್ವರ್ಯಾ ರೈ ಸಹ ಭಾರತೀಯ ಮಹಿಳೆಯರನ್ನು ಪ್ರತಿನಿಧಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಐಶ್ವರ್ಯಾ ರೈ ಅವರಿಗೆ  ಮಿಸ್‌ ವರ್ಲ್ಡ್‌ ಕಿರೀಟ ತೊಡಿಸಿದ್ದರಲ್ಲಿ ಅರ್ಥವಿದೆ. ಆದರೆ ಡಯಾನಾ ಹೆಡನ್‌ಗೆ ಈ ಕಿರೀಟ ಸಿಕ್ಕಿದ್ದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಹಿಂದಿನ ಕಾಲದಲ್ಲಿ ಭಾರತೀಯ ಮಹಿಳೆಯರು ರಸಾಯನಿಕಗಳನ್ನು, ಸೌಂದರ್ಯವರ್ದಕಗಳನ್ನು ಬಳಸಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿರಲಿಲ್ಲ.  ಆಗ ಇವೆಲ್ಲಾ ವಿದೇಶಿ ಮಾಫಿಯಾವಾಗಿತ್ತು. ಆದರೆ ಈಗ ಗಲ್ಲಿ ಗಲ್ಲಿಗಳಲ್ಲೂ ಬ್ಯೂಟಿ ಪಾರ್ಲರ್‌ಗಳು ತಲೆ ಎತ್ತುತ್ತಿವೆ. ಇದರಿಂದ ಸಿಗುವ ಸೌಂದರ್ಯ ನಿಜವಾದ ಸೌಂದರ್ಯವಲ್ಲ ಎಂದಿದ್ದಾರೆ.

1994ರಲ್ಲಿ ಐಶ್ವರ್ಯಾ ರೈ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರೆ, 1997 ರಲ್ಲಿ ಡಯಾನಾ ಹೆಡನ್ ವಿಶ್ವ ಸುಂದರಿ ಪಟ್ಟವನ್ನು ಗೆದ್ದುಕೊಂಡಿದ್ದರು.

One thought on “ನಿಜವಾದ ಭಾರತೀಯ ನಾರಿ ಅಂದ್ರೆ ಐಶ್ವರ್ಯಾ ರೈ, ಡಯಾನಾ ಹೆಡನ್‌ ಅಲ್ಲ : ತ್ರಿಪುರಾ ಸಿಎಂ

Leave a Reply

Your email address will not be published.

Social Media Auto Publish Powered By : XYZScripts.com