ಸಿದ್ದರಾಮಯ್ಯ ಬದಲು ಖರ್ಗೆ ಸಿಎಂ ಆದ್ರೆ ಒಳ್ಳೆಯದು ಎಂದ ಕಾಂಗ್ರೆಸ್‌ ಅಭ್ಯರ್ಥಿ…..!

ಯಾದಗಿರಿ : ಕಾಂಗ್ರೆಸ್ ನ ಹಿರಿಯ ನಾಯಕ ರಾಜ್ಯ ರಾಜಕಾರಣಿಕ್ಕೆ ಮರಳಿದ್ರೆ ಆಶ್ಚರ್ಯವಿಲ್ಲ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ ತಪ್ಪೇನಿಲ್ಲ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಮಾಲಕರೆಡ್ಡಿ ಹೇಳಿದ್ದಾರೆ.

ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಿಎಂ ಆದ್ರೆ ತಪ್ಪೇನಿಲ್ಲ ಎಂದಿರುವ ಅವರು, ಖರ್ಗೆ ದಲಿತ ನಾಯಕರು. ಅವರು ಸಿಎಂ ಆಗಲಿ. ಅವರ ಅನುಭವಕ್ಕೆ, ಆಡಳಿತಕ್ಕೆ ಸಿಎಂ ಆದ್ರೆ ಒಳ್ಳೆಯದು. ಆದರೆ ಇದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮುಂದಿನ ಸಿಎಂ ಅಂತ ಹೇಳಿದ್ದಾರೆ. ಚುನಾವಣೆ ನಂತರ ಶಾಸಕರ ಹೇಳಿಕೆ ಪಡೆದು ಸಿಎಂ ಯಾರುಗುತ್ತಾರೆ ಎಂದು ಗೊತ್ತಾಗಲಿದೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com