ಬಸವಣ್ಣನ ತತ್ವಗಳು ನನ್ನ ಜೊತೆಗಿವೆ, ನಾನು ಗೆದ್ದೇ ಗೆಲ್ಲುತ್ತೇನೆ : M.B ಪಾಟೀಲ್‌

ವಿಜಯಪುರ : ಮತಕ್ಷೇತ್ರದಲ್ಲಿ ಪಂಚಪೀಠ ಜಗದ್ಗುರುಗಳು ನೀತಿ ಸಂಹಿತೆ ಉಲ್ಲಂಘನೆ ಮಾಡಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ.  ಬಬಲೇಶ್ವರ ಮತ್ತು ಮನಗೂಳಿ ಸ್ವಾಮಿಜಿಗಳು ಭಕ್ತರಿಂದ ಆಣೆ ಪ್ರಮಾಣ ಮಾಡಿಸಿಕೊಂಡು ಬಿಜೆಪಿ ಪರ ಪ್ರಚಾರ ಮಾಡುತ್ತಿರುವುದಾಗಿ ಸಚಿವ ಎಂ. ಬಿ ಪಾಟೀಲ್ ಆರೋಪಿಸಿದ್ದಾರೆ.

ನನ್ನ ಮತಕ್ಷೇತ್ರದಲ್ಲಿ ನನ್ನ ಜನರನ್ನು ಹೆದರಿಸುವ ಕೆಲಸ ನಡೆದರೆ ನಾನು‌ ಸುಮ್ಮನೆ ಇರುವುದಿಲ್ಲ. ಮತಕ್ಷೇತ್ರದ ಜನರು ನನ್ನ ಗೆಲವು ಸೋಲು ನೋಡಿಕೊಳ್ಳುತ್ತಾರೆ. ಸ್ಬಾಮೀಜಿಗಳ ವಿರುದ್ಧ ನಮ್ಮ ಬಳಿಯೂ ಹಲವು ಅಸ್ತ್ರ ಗಳಿವೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇನ್ನು ಮುಂದೆ ಸ್ವಾಮೀಜಿಗಳು ಕ್ಷೇತ್ರಕ್ಕೆ ಬರಲು ಬಿಡುವುದಿಲ್ಲ . ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದರೆ ನಾನು ಹೊಣೆಗಾರನಲ್ಲ. ಈ ಬಗ್ಗೆ  ಜಿಲ್ಲಾಧಿಕಾರಿ ಮತ್ತು ಚುನಾವಣಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಸ್ವಾಮಿಜಿಗಳು ತಮ್ಮ ಜಾತಿಯ ಜನರಿಗೆ ದಾರಿ ತಪ್ಪುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಜನರನ್ನು ಬಲಿಪಶು ಮಾಡುತ್ತಿದ್ದಾರೆ.ರಾಷ್ಟ್ರೀಯ ಬಸವ ಸೈನ್ಯ, ಜಾಗತಿಕ ಲಿಂಗಾಯತ ಸಂಘ, ವಿನಯ್ ಕುಲಕರ್ಣಿ ಮತ್ತು ಬಸವರಾಜ ಹೊರಟ್ಟಿಯವರು ನಮ್ಮ ಜೊತೆಗಿದ್ದಾರೆ. ಕೂಡಲಸಂಗಮ ಸ್ವಾಮೀಜಿ‌ ಮತ್ತು ಕಾಗಿನೆಲೆ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ನಮ್ಮ ಜೊತೆ ಇದ್ದಾರೆ. ಸ್ವಾಮೀಜಿಗಳು ಕೂಡಾ ನನ್ನ ಪ್ರಚಾರಕ್ಕೆ ಬರುತ್ತಾರೆ. ನಾನು ಗೆದ್ದೆ ಗೆಲ್ಲುತ್ತೆನೆ.ಬಸವಣ್ಣನ ತತ್ವಗಳು ನನ್ನ ಜೊತೆಗಿವೆ ಎಂದು ಎಂ.ಬಿ ಪಾಟೀಲ್‌ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com