ರೈಲಿಗೆ ಡಿಕ್ಕಿ ಹೊಡೆದ ಶಾಲಾ ಬಸ್‌ : ಸ್ಥಳದಲ್ಲೇ ಉಸಿರುಬಿಟ್ಟ 11 ಮಕ್ಕಳು

ಲಖನೌ ; ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ರೈಲ್ವೇ ಕ್ರಾಸಿಂಗ್‌ ದಾಟುವಾಗ ರೈಲಿಗೆ ಡಿಕ್ಕಿ ಹೊಡೆದಿದ್ದು, 11 ಮಕ್ಕಳು ಸಾವಿಗೀಡಾಗಿರುವುದಾಗಿ ತಿಳಿದುಬಂದಿದೆ.

ಉತ್ತರ ಪ್ರದೇಶದ ಖುಷಿನಗರದಲ್ಲಿ ಈ ಅವಗಢ ಸಂಭವಿಸಿದೆ. ಶಾಲಾ ಬಸ್ಸೊಂದು ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿತ್ತು. ಈ ವೇಳೆ ರೈಲ್ವೇ ಕ್ರಾಸಿಂಗ್‌ ಬಂದಿದೆ. ಅದನ್ನು ದಾಟಲು ಮುಂದಾದ ವೇಳೆ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ. ಸಾವಿಗೀಡಾದ ಮಕ್ಕಳು ನಗರದ ಡಿವೈನ್‌  ಪಬ್ಲಿಕ್‌ ಶಾಲೆಯವರು ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಅನೇಕ ಮಕ್ಕಳಿಗೆ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚು ಸಾಧ್ಯತೆ ಇದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಇದೇ ತಿಂಗಳು ಏಪ್ರಿಲ್ 10ರಂದು ಕಾಂಗ್ರಾ ಎಂಬಲ್ಲಿ ಶಾಲಾ ಬಸ್ 100 ಅಡಿ ಆಳದ ಕಂದಕಕ್ಕೆ ಬಿದ್ದು 27 ಮಕ್ಕಳು ಸಾವನ್ನಪ್ಪಿದ್ದರು.

Leave a Reply

Your email address will not be published.